ಎಚ್.ಡಿ.ಕೆ ಜತೆಯಲ್ಲಿದ್ದುಕೊಂಡೇ ಕಾಂಗ್ರೆಸ್ ನವರು ವಿಷ ಕೊಟ್ರು : ಸಚಿವ ಆರ್.ಅಶೋಕ್

ಬೆಂಗಳೂರು,ಡಿಸೆಂಬರ್,06,2020(www.justkannada.in) : ಎಚ್.ಡಿ.ಕುಮಾರಸ್ವಾಮಿ ಜತೆಯಲ್ಲಿದ್ದುಕೊಂಡೇ ಕಾಂಗ್ರೆಸ್ ನವರು ವಿಷ ಕೊಟ್ರು. ಮೈತ್ರಿ ಸರ್ಕಾರ ಬಿದ್ದಿದ್ದೇ ಕಾಂಗ್ರೆಸ್ ಕಾರಣದಿಂದ. ಇದು ಅವರ ಆಪರೇಷನ್ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ಟೀಕಿಸಿದರು.

logo-justkannada-mysore2006-08ರ ಅವಧಿಯಲ್ಲಿ ಬಿಜೆಪಿ ಜತೆ ಮೈತ್ರಿ ಸರ್ಕಾರವಿದ್ದಾಗ ಎಚ್.ಡಿ.ಕೆ.ವರ್ಚಸ್ಸು ಹೆಚ್ಚಿತ್ತು. ಆದರೆ, ಕಾಂಗ್ರೆಸ್ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ವೇಳೆ ಕುಮಾರಸ್ವಾಮಿಗೆ ಕಿರುಕುಳ ಕೊಟ್ಟಿದ್ದಾರೆ.

ಕಾಂಗ್ರೆಸ್ ನಂಬಿದ್ರೆ ಕಥೆ ಅಷ್ಟೇ. ಗೋವಿಂದಾ, ಗೋವಿಂದಾ, ಇದನ್ನು ನಾನು ಹೇಳ್ತಿಲ್ಲ. ವಿರೋಧ ಪಕ್ಷದವರೇ ಹೇಳ್ತಿದ್ದಾರೆ ಎಂದು ಆರ್.ಅಶೋಕ್ ಲೇವಡಿ ಮಾಡಿದರು.

Congress-with-HDK-Poisons-Minister-R.Ashok

key words : Congress-with-HDK-Poisons-Minister-R.Ashok