ಸಂವಿಧಾನ ಕೇವಲ ಪುಸ್ತಕವಲ್ಲ, ಸ್ಪೂರ್ತಿಯ ಸಂಕೇತ- ಪ್ರಧಾನಿ ಮೋದಿ

ನವದೆಹಲಿ,ಜುಲೈ,3,2024 (www.justkannada.in): ಸಂವಿಧಾನ ಕೇವಲ ಪುಸ್ತಕವಲ್ಲ. ಅದು ನಮಗೆ ಪ್ರೇರಣೆ, ಸ್ಪೂರ್ತಿಯ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನರ ವಿವೇಕದ ಬಗ್ಗೆ ನಮಗೆ ಹೆಮ್ಮೆ ಇದೆ. ದೇಶದ ಜನ ಕಾರ್ಯದಕ್ಷತೆಗೆ ಪ್ರಾಥಮಿಕ ಆದ್ಯತೆ ನೀಡಿದ್ದಾರೆ. ಸಂವಿಧಾನ ನಮಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ. ದೇಶದ ಸಂವಿಧಾನ ನಮಗೆ ಪ್ರೇರಣೆಯಾಗಿದೆ. ಕೆಲವರು ಸಂವಿಧಾನದ ಪುಸ್ತಕ ಹಿಡಿದು ತಿರುಗುತ್ತಾರೆ . ಆದರೆ ಸಂವಿಧಾನ ದಿನ ಆಚರಣೆಗೆ ತಂದಿದ್ದೇವೆ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಮಹತ್ವ ತಿಳಿಸಲಾಗುತ್ತಿದೆ ಎಂದರು.

ಭಾರತ 3ನೇ ಆರ್ಥೀಕ ಶಕ್ತಿಯಾಗಿ ರೂಪಿಸಲು ಜನ ಗೆಲ್ಲಿಸಿದ್ದಾರೆ ಮುಂದೆ ಭಾರತ ವಿಶ್ವದ 3ನೇ ರಾಷ್ಟ್ರವಾಗಿ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.  ದೇಶದ ರೈತರಿಗೆ ಹಲವು ಯೋಜನೆ ಜಾರಿಗೆ ತಂದಿದ್ದೇವೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿದ್ದೇವೆ.  ಬಡತನದ ವಿರುದ್ದ ಹೋರಾಟದಲ್ಲಿ ಭಾರತ ಗೆಲುವು ಸಾಧಿಸಲಿದೆ ಬಡತನದ ವಿರುದ್ದ ಹೋರಾಟದಲ್ಲಿ ಮುಂದಿನ 5 ವರ್ಷ ನಿರ್ಣಾಯಕ ಎಂದು ತಿಳಿಸಿದರು.

Key words: Constitution, symbol of inspiration, PM Modi