ದೇಶದ ಎಲ್ಲಾ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ : ಮೈಸೂರು ವಿವಿ ಕುಲಪತಿ ಪ್ರೊ.ಜಿಹೇಮಂತ್ ಕುಮಾರ್

ಮೈಸೂರು,ಸೆಪ್ಟೆಂಬರ್,15,2020(www.justkannada.in) : ಪ್ರಸ್ತುತ ದೇಶವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಶ್ರೇಷ್ಠ, ಆದರ್ಶ ಭಾರತೀಯ ಸಂವಿಧಾನದಲ್ಲಿ ಪರಿಹಾರವಿದೆ. ಈ ಕಾರಣದಿಂದ ಸಂವಿಧಾನ ಓದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೈಸುರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

jk-logo-justkannada-logo

ರಾಷ್ಟ್ರೀಯ ಸೇವಾ ಯೋಜನಾ ಕೋಶ ಕರ್ನಾಟಕ ಜಾನಪದ ವಿವಿ, ಮೈಸೂರು ವಿವಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಓದು ರಾಜ್ಯಮಟ್ಟದ ಆನ್ ಲೈನ್ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಂಖ್ಯೆ ಹೆಚ್ಚಳ, ಭಯೋತ್ಪಾದನೆ, ನಿರುದ್ಯೋಗ, ಬಡತನ, ಜಾತಿ ಅಸಮಾನತೆ ಈ ಎಲ್ಲಾ ಸಮಸ್ಯೆಗಳಿಗೂ ಸಂವಿಧಾನದಲ್ಲಿ ಪರಿಹಾರವಿದೆ. ಹೀಗಾಗಿ, ಪ್ರತಿಯೊಬ್ಬರಿಗೂ ಸಂವಿಧಾನದ ಸಾಮಾನ್ಯ ಜ್ಞಾನವಾದರೂ ಇರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

Constitution-solution-all-problems-country-Chancellor-Mysore Vivi-Prof.g.hemant Kumar

ದೇಶದ ಪ್ರತಿಯೊಬ್ಬ ನಾಗರೀಕರು ಸಮಾನತೆ, ಸ್ವಾತಂತ್ರ್ಯ, ಬ್ರಾತೃತ್ವದಿಂದ ಬದುಕುವಂತೆ ಸಂವಿಧಾನವು ಉತ್ತಮ ಮೌಲ್ಯಗಳನ್ನು ಒಳಗೊಂಡಿದೆ. ಸಾಮಾಜಿಕ ಸಾಮರಸ್ಯವನ್ನು ಮೂಡಿಸುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯು ಗೌರವಯುತವಾಗಿ ಬದುಕುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.

ಸಂವಿಧಾನದ ಓದು ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರೆ ಜಗತ್ತಿನ ಶ್ರೇಷ್ಠ ದೇಶಗಳ ಸಾಲಿನಲ್ಲಿ ಭಾರತವು ನಿಲ್ಲುತ್ತದೆ. ಕಾರ್ಯಕ್ರಮದಲ್ಲಿ ಅನೇಕ ಸಂವಿಧಾನ ತಜ್ಞರು ಭಾಗವಹಿಸಿದ್ದು, ಎಲ್ಲರಿಗೂ ಉತ್ತಮ ಮಾಹಿತಿಯನ್ನು ಒದಗಿಸುತ್ತಾರೆ ಎಂದು ತಿಳಿಸಿದರು.

 

Constitution-solution-all-problems-country-Chancellor-Mysore Vivi-Prof.g.hemant Kumar

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಮಾತನಾಡಿ, ಜಗತ್ತಿನಲ್ಲಿಯೇ ಭಾರತ ಸಂವಿಧಾನವು ಶ್ರೇಷ್ಠ ಸಂವಿಧಾನವಾಗಿದೆ. ಸೌಹಾರ್ದತೆಯ ಸಮಾಜ ಕಟ್ಟುವುದಕ್ಕೆ ಸಂವಿಧಾನದ ಅರಿವು ಬಹಳ ಮುಖ್ಯವಾಗಿದೆ ಎಂದರು.

ಸಂವಿಧಾನ ಓದು ಕಾರ್ಯಕ್ರಮವು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಬ್ರಾತೃತ್ವದ ಸಮಾಜವನ್ನು ಕಟ್ಟಿಕೊಳ್ಳುವಂತಹ ಜವಾಬ್ದಾರಿ ಹೊಂದಿರುವ ಎಲ್ಲರಿಗೂ ಬಹಳ ಪೂರಕವಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ರಾಜ್ಯದ ಎಲ್ಲೆಡೆ ಸಂಚರಿಸಿ ಸಂವಿಧಾನ ಓದು ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್ ಮತ್ತು ಸಂವಿಧಾನ’ ವಿಷಯ ಕುರಿತು ಕೆರೆಕೋಣ ಸಹಯಾನ ಪ್ರಾಧ್ಯಾಪಕ ಡಾ.ವಿಠ್ಠಲ್ ಭಂಡಾರಿ, ‘ಸಂವಿಧಾನ ಆಶಯ ಮತ್ತು ವಿನ್ಯಾಸ’ ವಿಷಯ ಕುರಿತು ಎನ್.ಎಸ್.ಎಸ್.ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಸತೀಶ್ ಗೌಡ.ಎನ್, ‘ಮಹಿಳೆ ಮತ್ತು ಸಂವಿಧಾನ ‘ವಿಷಯ ಕುರಿತು ಸಂವಿಧಾನ ಓದು ಅಭಿಯಾನ ಸಂಚಾಲಕ ಕೆ.ಎಸ್.ವಿಮಲ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎನ್.ಎಸ್.ಎಸ್.ಪ್ರಾದೇಶಿಕ ನಿರ್ದೇಶಿಕ ಕೆ.ವಿ.ಖಾದ್ರಿ ನರಸಿಂಹಯ್ಯ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಕ.ಜಾ.ವಿ.ವಿ.ಗೋಟಗೋಡಿ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

key words : Constitution-solution-all-problems-country-Chancellor-Mysore Vivi-Prof.g.hemant Kumar