ಮೈಸೂರು,ಆ,5,2020(www.justkannada.in): ಅಯೋಧ್ಯೆಯಲ್ಲಿ ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ಹಿನ್ನೆಲೆ ಮೈಸೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಮೈಸೂರಿನ ರಾಮಲಿಂಗೇಶ್ವರ ದೇಗುಲದಲ್ಲಿ ಮಧ್ಯಾಹ್ನ 12 ಘಂಟೆಗೆ ರಾಮನ ಭಕ್ತರು ವಿಶೇಷ ಪೂಜೆ ಮಾಡಿಸಲಿದ್ದಾರೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇಗುಲ, ಗಂಗರು ಪ್ರತಿಪ್ಠಾಪಿಸಿದ್ದ ಶ್ರೀಕೋದಂಡರಾಮ ದೇವಸ್ಥಾನದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 12 ನೇ ಶತಮಾನದ ಪುರಾಣ ಪ್ರಸಿದ್ಧ ದೇವಸ್ಥಾನ ಇದಾಗಿದ್ದು ರಾಮನ ಉತ್ಸವ ಮೂರ್ತಿಗೆ 1500 ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನ ಮೈಸೂರು ಜಿಲ್ಲೆ ಬನ್ನೂರು ಪಟ್ಟಣದಲ್ಲಿದ್ದು, ದೇಗುಲದಲ್ಲಿ ಅರ್ಚಕರಾದ ಕೃಷ್ಣಸ್ವಾಮಿ, ಶ್ರೀನಿವಾಸ್, ಶ್ರೀಕಾಂತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು.
ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳಿಂದ ಶ್ರೀಕೋದಂಡರಾಮ ಕಂಗೊಳಿಸುತ್ತಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ದೇವಸ್ಥಾನದಲ್ಲಿ ಪೂಜೆ ನಡೆಸಲಾಗುತ್ತಿದೆ. ಭಕ್ತರಿಗೆ ಸ್ಯಾನಿಟೈಸರ್ ನೀಡಿ ಒಳಕ್ಕೆ ಪ್ರವೇಶ ನೀಡಲಾಗುತ್ತಿದ್ದು, ಬೆಳಗ್ಗಿನಿಂದಲೂ ಭಕ್ತರು ಪೂಜೆಗೆ ಆಗಮಿಸುತ್ತಿದ್ದಾರೆ.
ಮೈಸೂರಿನ ಒಂಟಿಕೊಪ್ಪಲು ರಾಮಮಂದಿರದಲ್ಲಿ ವಿಶೇಷ ಪೂಜೆ…
ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದ್ದು, ಮೈಸೂರಿನ ಒಂಟಿಕೊಪ್ಪಲು ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಭ್ರಮಾಚರಣೆಗೆ ಸಾಂಸ್ಕೃತಿಕ ನಗರಿಯಲ್ಲಿ ಬ್ರೇಕ್ ಹಾಕಲಾಗಿದ್ದು, ರಾಮನ ಭಾವಚಿತ್ರ ಹಿಡಿದು ಬಿಜೆಪಿ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಎಲ್ ಕೆ ಅಡ್ವಾನಿ,ಮುರುಳಿ ಮನೋಹರ ಜೋಷಿ ಪ್ರಧಾನಿ ಮೋದಿ ಹೆಸರನಲ್ಲಿ ವಿಶೇಷ ಅರ್ಚನೆ ಮಾಢಿಸಿ ದೇವರಿಗೆ ಹಿಡುಗಾಯಿ ಹೊಡೆದು ಸಂಭ್ರಮಿಸಿದರು. ಕಾರ್ಯಕ್ರಮ ದಲ್ಲಿ ಶಾಸಕ ನಾಗೇಂದ್ರ ಇನ್ನಿತರು ಭಾಗಿಯಾಗಿದ್ದರು.
ಇನ್ನು ಇಂದು ಸಂಭ್ರಮಾಚರಣೆಗೆ ಸಾಂಸ್ಕೃತಿಕ ನಗರಿಯಲ್ಲಿ ಬ್ರೇಕ್ ಹಾಕಲಾಗಿದ್ದು, ತಡರಾತ್ರಿಯಿಂದ 24 ಗಂಟೆ ಕಾಲ ಮೈಸೂರು ನಗರದಲ್ಲಿ ನಿಷೇಧಾಜ್ನೆ ಜಾರಿ ಮಾಡಲಾಗಿದೆ.
Key words: construction -Ram Mandir-bhoomi pooja-Special worship – various temples -Mysore.