ಬೆಂಗಳೂರು,ಆ,4,2020(www.justkannada.in): ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಇದೇ ಆ. 5ರಂದು (ಬುಧವಾರ) ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿರುವುದು ಅತ್ಯಂತ ಸಂತಸದ ವಿಷಯ. ಕೋಟ್ಯಂತರ ಮಂದಿಯ ಭಾವನಾತ್ಮಕ ಕ್ಷೇತ್ರವಾಗಿರುವ ಈ ಪುಣ್ಯಸ್ಥಳದಲ್ಲಿ ಗತವೈಭವ ಮರುಕಳಿಸಲಿ ಎಂಬುದು ನನ್ನ ಆಶಯ. ಭಾರತೀಯ ಭೂಪಟದಲ್ಲಿ ಅಯೋಧ್ಯೆ ಮತ್ತೆ ವಿಜೃಂಭಿಸಲಿ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ನುಡಿದಿದ್ದಾರೆ.
ನಾಳೆ ರಾಮಮಂದಿರ ಭೂಮಿಪೂಜೆ ಕುರಿತು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಈ ಹಿಂದೆ ಶ್ರೀರಾಮನ ಜನ್ಮಭೂಮಿ ವಿಷಯವಾಗಿ ಏನೇ ವಿವಾದ ಇದ್ದಿರಬಹುದು. ಅದೀಗ ಘನ ಸರ್ವೋಚ್ಚ ನ್ಯಾಯಾಲಯದಲ್ಲಿಯೇ ಬಗೆಹರಿದಿದೆ. ಹೀಗಾಗಿ ಇಂದು ನಾವು-ನೀವೆಲ್ಲರೂ ಅದಕ್ಕೆ ಬದ್ಧರಾಗಿ ನಡೆಯಬೇಕಾಗಿರುವುದು ಕರ್ತವ್ಯ ಕೂಡಾ ಹೌದು. ವಿವಾದಿತ ಭೂಮಿ ಸಂಬಂಧ ಈ ನೆಲದಲ್ಲಿ ಅನೇಕ ಹೋರಾಟಗಳು ನಡೆದಿವೆ. ಸಂಘಪರಿವಾರದವರು ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಹೋರಾಟದ ಕೊಡುಗೆಯೂ ಇದರ ಹಿಂದಿದೆ. ಆದರೆ, ಈಗೆಲ್ಲ ಸಮಸ್ಯೆಗಳೂ ನಿವಾರಣೆಯಾಗಿದ್ದು, ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯುವ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದರು.
ಹೀಗಾಗಿ ಇಲ್ಲಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಹೊಸ ಶೆಕೆ ಪ್ರಾರಂಭವಾಗಲಿ . ಭಗವಾನ್ ಶ್ರೀರಾಮನು ಆದಷ್ಟು ಬೇಗ ದೇಶವನ್ನು ಕೊರೋನಾ ಮುಕ್ತ ಮಾಡಲಿ ಎಂದೂ ಈ ಸಂದರ್ಭದಲ್ಲಿ ಕೋರಿಕೊಳ್ಳುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
Key words: Construction – Ram Mandir- New era -Sri Rama –begins-Minister- ST Somashekhar …