ಕಲುಷಿತ ನೀರು ಸೇವಿಸಿ ಸಾವು ಕೇಸ್: ಮುಡಾ ಆಯುಕ್ತರಿಗೆ ಕ್ಲಾಸ್: ಇಂಜಿನಿಯರ್ ಸಸ್ಪೆಂಡ್‌ ಗೆ ಶಾಸಕ ಜಿ.ಟಿ ದೇವೇಗೌಡ ಒತ್ತಾಯ.

ಮೈಸೂರು,ಮೇ,21,2024 (www.justkannada.in): ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಇಂಜಿನಿಯರ್ ಕೆ.ಟಿ ರವಿ ಅಮಾನತು ಮಾಡುವಂತೆ ಶಾಸಕ ಜಿ.ಟಿ ದೇವೇಗೌಡ ಒತ್ತಾಯಿಸಿದ್ದಾರೆ.

ಪ್ರಕರಣ ಸಂಬಂಧ ಮುಡಾ ಆಯುಕ್ತರಿಗೆ ಕರೆ ಮಾಡಿ ಶಾಸಕ ಜಿಟಿ.ದೇವೇಗೌಡ  ತರಾಟೆ ತೆಗೆದುಕೊಂಡರು. ಜನಕ್ಕೆ ನೀರು ಪೂರೈಸುವ ತಾನೇ ಸೈಟ್ ಮಾಡುತ್ತಿದ್ದ ಇಂಜಿನಿಯರ್ . ನಾನು ಮೂರು ವರ್ಷದಿಂದ ಹೇಳುತ್ತಲೇ ಇದ್ದೇನೆ.  ಕುಡಿಯುವ ನೀರಿಗೆ ಟ್ಯಾಂಕ್ ಮಾಡಿಲ್ಲ.  ಹೇಳಿ ಹೇಳಿ ಸಾಕಾಗಿದೆ.   ರಿಯಲ್ ಎಸ್ಟೇಟ್ ಮಾಡಿಕೊಂಡು ಸೈಟ್ ಮಾರುತ್ತಿದ್ದ.  ಸ್ವಂತ ಲೇ ಔಟ್ ಮಾಡಿಕೊಂಡಿರೊದು ಕೆಲಸ. ಸರ್ಕಾರ ಸೆಪ್ಟಿಕ್ ಟ್ಯಾಂಕ್ ಮಾಡಿದೆ. ಅದಕ್ಕೆ ಪೈಪ್‌ ಲೈನ್ ಲಿಂಕ್ ಮಾಡಲಿಲ್ಲ. ಮೂಡಾ ಇಂಜಿನಿಯರ್ ಕೆಟಿ.ರವಿ ಸಸ್ಪೆಂಡ್‌ ಮಾಡಬೇಕು ಎಂದು ಒತ್ತಾಯಿಸಿದರು.

ಈ ದುರಂತಕ್ಕೆ ಮುಡಾ ಅಧಿಕಾರಿಗಳೇ ನೇರ ಹೊಣೆ. ಮೂಡಾ ಅಧಿಕಾರಿಗಳು ಕೆಲಸ ಮಗಿಸಿಕೊಟ್ಟರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ. ಇದನ್ನೇ ಮೂಡಾ ಅಧ್ಯಕ್ಷ ಕೆ.ಮರೀಗೌಡಗೂ ಹೇಳಿದ್ದೇನೆ. ಮುಡಾದಿಂದ ತಪ್ಪಾಗಿದೆ.  ಮೊದಲು ಕಲುಷಿತ ನೀರು ಬರದಂತೆ ಪೈಪ್ ಸರಿ ಮಾಡಲಿ. ಬೊರ್‌ವೆಲ್ ನೀರು ಟೆಸ್ಟಿಂಗ್ ಕಳುಹಿಸಿದ್ದೇವೆ. ನೀರು ಕುಡಿಯಲು ಯೋಗ್ಯ ಅಲ್ಲದಿದ್ರೆ ಬೇರೆ ಬೊರ್‌ ವೆಲ್ ತೆಗಿಸಲಾಗುವುದು. ಇನ್ನು 6 ತಿಂಗಳಲ್ಲಿ ಕಾವೇರಿ ನೀರಿ‌ನ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆ.ಸಾಲುಂಡಿಲಿ ಗ್ರಾಮದಲ್ಲಿ ಯುವಕ ಸಾವನ್ನಪ್ಪಿದ್ದಾನೆ.  48 ಜನರು ಅಸ್ವಸ್ಥ ಆಗಿದ್ದಾರೆ. ದೇವರ ದಯೆ ದೊಡ್ಡ ಅನಾಹುತ ತಪ್ಪಿದೆ‌. ತಕ್ಷಣ ಎಲ್ಲರಿಗೂ ಚಿಕಿತ್ಸೆ ಸಿಕ್ಕಿದೆ. ದುಡ್ಡು ಎಷ್ಟೇ ಖರ್ಚಾದರೂ ಕೊಡೊಣ. ಮೊದಲು ಪೈಪ್ ಲೈನ್ ವ್ಯವಸ್ಥೆ ಸರಿ ಮಾಡಿ ಎಂದು ಜಿಟಿ ದೇವೇಗೌಡ ಆಗ್ರಹಿಸಿದರು. ನಿಮ್ಮ ಸೂಪರಡೆಂಟ್ ಇಂಜಿನಿಯರ್ ಗಳೂ ಇದ್ದಾವಲ್ಲ ಅದೇನ್ ಮಾಡ್ತಾವೊ. ಮೊದಲು ಅವರನ್ನ ಇಲ್ಲಿಗೆ ಕಳುಹಿಸಿ ಸಮಸ್ಯೆ ಸರಿ ಮಾಡಿ. ಮುಖ್ಯಮಂತ್ರಿ ಕೂಡ ಬರುವ ಸಾಧ್ಯತೆ ಇದೆ. ಮೊದಲು ಸಮಸ್ಯೆ ಬಗೆಹರಿಸಿ  ಎಂದು ಮುಡಾ ಆಯುಕ್ತರಿಗೆ ಜಿಟಿ ದೇವೇಗೌಡ ಆಗ್ರಹಿಸಿದರು.

Key words: contaminated, water,  G. T. Deve Gowda, MUDA