ಬೆಂಗಳೂರು,ಜನವರಿ14,2022(www.justkannada.in): ರಾಜ್ಯದಲ್ಲಿ ಹಲವೆಡೆ ಕೊರೋನಾ ಸೋಂಕು ಹೆಚ್ಚುತ್ತಿದೆ. ಕೋವಿಡ್ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ,ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾದ್ಯಮಹಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕಟ್ಟುನಿಟ್ಟಿನ ಕೋವಿಡ್ ರೂಲ್ಸ್ ಮುಂದುವರೆಯಲಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರೇ ಹೇಳಿದ್ದಾರೆ. ಕೊರೋನಾ ಕಂಟ್ರೋಲ್ ಗೆ ಜನರ ಸಹಕಾರ ಅಗತ್ಯ. ಹಲವೇಡೆ ಸೋಂಕು ಹೆಚ್ಚಾಗುತ್ತಿದೆ. ಲಕ್ಷಣ ಇಲ್ಲವೆಂದು ಯಾರೂ ನಿರ್ಲಕ್ಷಿಸಬೇಡಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್ ಡೋಸ್ ಪಡೆಯಲು ಅರ್ಹರಿರುವವರು ಪಡೆಯಿರಿ. 2ನೇ ಡೋಸ್ ಪಡೆಯದವರು ಆದಷ್ಟು ಬೇಗ ಪಡೆಯಿರಿ. ಅನಗತ್ಯವಾಗಿ ಜನಸಂದಣಿ ಜನ ಸೇರೋದು ಬೇಡ. ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರೆಯುತ್ತೆ. ಲಾಕ್ ಡೌನ್ ಮೂಲಕ ಕೊರೋನಾ ನಿಯಂತ್ರಿಸುವುದು ಸರಿಯಲ್ಲ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ. ಅನಗತ್ಯವಾಗಿ ಸಭೆ ಸಮಾರಂಭ ಬೇಡ. ಸಿಎಂಗಳ ಜತೆಗಿನ ಸಭೆಯಲ್ಲಿ ಪ್ರಧಾನಿ ಮೋದಿ ಇದನ್ನೇ ಹೇಳಿದ್ದಾರೆ. ಕೇಸ್ ಹೆಚ್ಚಿರೋ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.
Key words: Continue- until -covid rules-Minister -Dr. K. Sudhakar
ENGLISH SUMMARY…
COVID appropriate guidelines to continue till month end- Minister Dr. K. Sudhakar
Benaluru, January 14, 2022 (www.justkannada.in): “As the COVID-19 Pandemic is spreading across the State, we have decided to extend the COVID guidelines till this month-end,” opined Health Minister Dr. K. Sudhakar.
Speaking to the media persons in Bengaluru today, he informed that tough rules will continue in the State. “Chief Minister Basavaraj Bommai himself has told this. However, the cooperation of the people is very important in controlling the pandemic, which is increasing in several places. I request everybody not to neglect even though there are no symptoms. Please wear masks compulsorily. For those who are eligible to get the booster dose please don’t forget to take it. Those who haven’t taken the 2nd dose yet, please take it immediately. I also request people not to gather in groups and request to maintain physical distancing,” he urged.
The weekend curfew in the State will continue. Prime Minister Narendra Modi has informed us that controlling corona by imposing lockdown at this juncture is not correct. He has asked to take precautionary measures without troubling the people. “However, strict measures will be taken in the districts where the cases are more,” he informed.
Keywords: Health Minister Dr. K. Sudhakar/ COVID guidelines/ to continue/ month end/ state