ಮೈಸೂರು,ಜೂನ್ ,20,2021(www.justkannada.in): ಗ್ರಾಮೀಣ ಭಾಗದ ಜನರ ನಿರ್ಲಕ್ಷ್ಯದಿಂದ ಸಾವಿನ ಪ್ರಕರಣ ಹೆಚ್ಚಾಗುತ್ತಿದೆ. ಶೇ.5ರಷ್ಟು ಸಾವಿನ ಪ್ರಮಾಣ ಕಡಿಮೆ ಆಗಿಲ್ಲವಾದ್ದರಿಂದ ಲಾಕ್ ಡೌನ್ ಮುಂದುವರಿಸಲಾಗುತ್ತಿದೆ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು.
ಮೈಸೂರಿನಲ್ಲಿ ಲಾಕ್ ಡೌನ್ ಮುಂದುವರಿಕೆ ಬಗ್ಗೆ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಮೈಸೂರು ಜಿಲ್ಲೆ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳ ಜನರು ಮೈಸೂರಿನಲ್ಲೇ ಚಿಕಿತ್ಸೆ ಪಡೆದಯುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಸೋಂಕಿನ ಲಕ್ಷಣಗಳು ಬಂದರೂ ತಡವಾಗಿ ಆಸ್ಪತ್ರೆಗೆ ಅಗಮಿಸುತ್ತಿರುವುದರಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ.
ಬಹುತೇಕರು ವೆಂಟಿಲೇಟರ್ ಗೆ ಹೋಗುವ ಸ್ಥಿತಿಗೆ ಬಂದಾಗ ಮಾತ್ರ ಆಸ್ಪತ್ರೆಗೆ ಬರುತ್ತಿದ್ದಾರೆ. ಈಗ ಬೆಡ್ ಗಳು ಖಾಲಿ ಇದೆ, ಆದರೆ ವೆಂಟಿಲೇಟರ್ ಗಳು ಖಾಲಿ ಇಲ್ಲ. ಇದೆ ಕಾರಣಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮೈಸೂರಿನಲ್ಲಿ ಲಾಕ್ ಡೌನ್ ಮುಂದುವರಿಯುತ್ತಿದೆ. ಶೇ.5ರಷ್ಟು ಸಾವಿನ ಪ್ರಮಾಣ ಕಡಿಮೆ ಆಗಿಲ್ಲವಾದ್ದರಿಂದ ಲಾಕ್ ಡೌನ್ ಮುಂದುವರಿಸಲಾಗುತ್ತಿದೆ ಎಂದು ಶಾಸಕ ಎಲ್ ನಾಗೇಂದ್ರ ಹೇಳಿದರು.
Key words: Continued -lockdown – death rate – MLA-L. Nagendra.