ಮೈಸೂರು,ಜೂನ್,28,2021(www.justkannada.in): ಮೈಸೂರಿನ ಎನ್.ಟಿ.ಎಂ ಶಾಲೆ ಉಳಿಸುವಂತೆ ಒತ್ತಾಯಿಸಿ ಮಹಾರಾಣಿ ಮಾದರಿ (ಎನ್.ಟಿ.ಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ಪ್ರತಿಭಟನೆ ಮುಂದುವರೆದಿದೆ.
ಮೈಸೂರಿನ ಟೌನ್ ಹಾಲ್ ಮುಂಭಾಗ, ಜಿಲ್ಲಾಧಿಕಾರಿಗಳ ಕಚೇರಿ, ಎನ್ ಟಿ ಎಂ ಶಾಲೆ ಮುಂಭಾಗ, ಸದ್ವಿದ್ಯಾ ಪಾಠಶಾಲೆ ಮುಂಭಾಗ ಸೇರಿ ಹಲವೆಡೆ ಮಹಾರಾಣಿ ಮಾದರಿ (ಎನ್.ಟಿ.ಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಮೈಸೂರಿನ ಹಲವೆಡೆ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.
ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕಾಗಿ ಎನ್.ಟಿ.ಎಂ ಶಾಲೆಯನ್ನು ಕೆಡಹುವುದು ಬೇಡ. ಶಾಲೆಯನ್ನು ನೆಲಸಮಗೊಳಿಸಿದರೆ ವಿವೇಕಾನಂದರ ತತ್ವಾದರ್ಶಗಳಿಗೆ ವಿರುದ್ದವಾಗುತ್ತದೆ. ಶಾಲೆಯನ್ನು ಉಳಿಸಿಕೊಂಡು ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೆ ಶಾಲೆಯೂ ಉಳಿಯಲಿ, ಸ್ಮಾರಕವೂ ಆಗಲಿ ಪ್ರತಿಭಟನಾಕಾರರು ಎಂದು ಘೋಷಣೆ ಕೂಗಿದರು. ಇದೇ ವೇಳೆ ಮೈಸೂರಿನ ಗನ್ ಹೌಸ್ ಬಳಿ ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಅಂದಿನ ಆಳರಸರ ದೂರದೃಷ್ಟಿಯಿಂದ ಬಾಲಕಿಯರ ಶಿಕ್ಷಣಕ್ಕಾಗಿ ನಿರ್ಮಾಣವಾಗಿರುವ ಎನ್ಟಿಎಂ ಶಾಲೆಯನ್ನು ಉಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
Key words: Continued- protests- demanding – saving – NTM school – Mysore