ಬೆಂಗಳೂರು,ಅಕ್ಟೋಬರ್,20,2021(www.justkannada.in): ಹಾನಗಲ್ ಸಿಂದಗಿ ಉಪಚುನಾವಣೆ ಸಮೀಪಿಸುತ್ತಿದ್ದು ಚುನಾವಣ ಕಣ ರಂಗೇರಿದೆ. ಈ ಮಧ್ಯೆ ಮೂರು ಪಕ್ಷಗಳ ಟ್ವಿಟ್ ಸಮರ, ಟಾಕ್ ವಾರ್ ಮುಂದುವರೆದಿದ್ದು ಇದೀಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಬೈಗಮಿ (ದ್ವಿಪತ್ನಿತ್ವ) ಪದ ಬಳಸಿ ರಾಜ್ಯ ಬಿಜೆಪಿ ಘಟಕ ಟಾಂಗ್ ನೀಡಿದೆ.
ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಘಟಕ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಹೆಚ್.ಡಿಕೆ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿದೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ ರಾಜ್ಯ ಬಿಜೆಪಿ ಘಟಕ, ಈ ದೇಶದಲ್ಲಿ ಪ್ರಜ್ಞಾವಂತರು, ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ? ಅವುಗಳ ಪಟ್ಟಿಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ. ಅವೆಲ್ಲವೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೂ ಹೌದು.
ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ (ಬ್ರೀಚ್ ಆಫ್ ಟ್ರಸ್ಟ್ ), ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ. ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ಕುಮಾರಸ್ವಾಮಿಯವರೇ ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ? ಎಂದು ಹೆಚ್.ಡಿ ಕುಮಾರಸ್ವಾಮಿ ಅವರನ್ನ ಬಿಜೆಪಿ ಕುಟುಕಿದೆ.
Key words: Continued -Tweet War-BJP – former CM H.D Kumaraswamy
ENGLISH SUMMARY…
War of tweets between political party leaders continue: BJP accuses former CM HDK of Bigamy
Bengaluru, October 20, 2021 (www.justkannada.in): The war of tweets between the three national party leaders of Karnataka criticizing each other has continued as the byelections for Sindhagi and Hanagal are nearing. The BJP, in its tweet, has pulled the leg of former CM H.D. Kumaraswamy, accusing him of Bigamy.
The war of tweets appears to have become personal. On its Twitter handle, the Karnataka unit of the BJP said: “Signal jump, breach of trust, corruption, nepotism and more than anything else Bigamy. Should H. D. Kumaraswamy, who always ridicules mistakes of others, not be careful about these things?”
Keywords: Karnataka State BJP/ former Chief Minister H.D. Kumaraswamy/ tweet war/ Bigamy