ಮಂಡ್ಯ,ಜುಲೈ,10,2021(www.justkannada.in): ಕೆ.ಆರ್ ಎಸ್ ಸುತ್ತಮುತ್ತಾ ಅಕ್ರಮ ಗಣಿಗಾರಿಕೆ ವಿರುದ್ದ ಹೋರಾಟ ಮುಂದುವರೆಸುವುದಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ ಅಂಬರೀಶ್, ಅಕ್ರಮ ಗಣಿಗಾರಿಕೆ ಸಂಬಂಧ ಶೀಘ್ರವೇ ಸಿಎಂ ಮತ್ತು ಗಣಿ ಸಚಿವರನ್ನ ಭೇಟಿಯಾಗಿ ಚರ್ಚಿಸುತ್ತೇನೆ. ಅಕ್ರಮ ಗಣಿಗಾರಿಕೆ ವಿರುದ್ದ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ.
ನಾನು ಮಾಡುತ್ತಿರುವ ಕೆಲಸಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ ಅಂದರೆ ನಾನು ಸರಿಯಾಗಿದ್ದೇನೆ ಎಂದೇ ಅರ್ಥ. ಕೆಆರ್ಎಸ್ ಡ್ಯಾಂ ವಿಚಾರದಲ್ಲಿ ನನ್ನ ತಪ್ಪಿಲ್ಲ. ಕೆಆರ್ಎಸ್ ಡ್ಯಾಂ ಸುರಕ್ಷತೆಯನ್ನ ಮರುಪರಿಶೀಲನೆ ಮಾಡಬೇಕು ಎಂದು ಹೇಳಿದ ಸುಮಲತಾ ಅಂಬರೀಶ್, ಹೆಚ್ಡಿ ಕುಮಾರಸ್ವಾಮಿ ಡಿಕ್ಟೇಟರ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನನ್ನ ವಿರುದ್ಧ ಮಾತನಾಡಲು ಹಲವರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ಮೇಲೆ ಮಾತಿನ ದಾಳಿ ನಡೆಸಿದ್ದಾರೆ. ನನಗೆ ಜನರ ಬೆಂಬಲ ಇದೆ. ಕೆಆರ್ಎಸ್ ಜಲಾಶಯದ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ತಿಳಿಸಿದರು.
ಜೆಡಿಎಸ್ ಗೆ ಡ್ಯಾಮೇಜ್ ಆಗಿದೆ ಅಂತಾ ಗೊತ್ತಾಗಿದೆ. ಕೆಆರ್ ಎಸ್ ಅಡಿಪಾಯ ಪರಿಶೀಲಿಸಲು ಆಗಲ್ಲ. ಅಧಿಕಾರಿಗಳು ಕೇವಲ ವರದಿ ನೀಡುತ್ತಾರೆ ಅಷ್ಟೆ. ಅಧಿಕಾರಿಗಳದ್ದು ಸರ್ಟಿಫಿಕೇಟ್ ಕೊಡುವ ಕೆಲಸ ಅಲ್ಲ. ನಾನು ಏನು ಮಾಡಬೇಕು ಎಂದು ಚೆನ್ನಾಗಿ ಗೊತ್ತು ಎಂದು ಸುಮಲತಾ ಅಂಬರೀಶ್ ತಿಳಿಸಿದರು.
Key words: Continued- war- against- illegal mining- MP Sumalatha Ambarish