6ನೇ ದಿನವು ಮುಂದುವರೆದ ಶ್ರೀಜಯಚಾಮರಾಜೇಂದ್ರ ಎಜಿನಿಯರಿಂಗ್ ಕಾಲೇಜು ನೌಕರರ ಪ್ರತಿಭಟನೆ

ಮೈಸೂರು,ನವೆಂಬರ್,12,2020(www.justkannada.in) : ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರಕಾರಿ ಅನುದಾನಿತ ಶ್ರೀಜಯಚಾಮರಾಜೇಂದ್ರ ಎಜಿನಿಯರಿಂಗ್ ಕಾಲೇಜಿನ ನೌಕರರ ಸಂಘದ ವತಿಯಿಂದ ನಡೆಸುತ್ತಿರುವ ಪ್ರತಿಭಟನೆ 6ನೇ ದಿನಕ್ಕೆ ಕಾಲಿರಿಸಿದೆ.

kannada-journalist-media-fourth-estate-under-loss

ಬೇಡಿಕೆ ಈಡೇರಿಸುವವರೆಗೂ ಕಾಲೇಜು ಕ್ಯಾಂಪಸ್ ನಲ್ಲಿ ಅನಿರ್ಧಿಷ್ಟಾವಧಿಯ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘಟಕರು ತಿಳಿಸಿದರು.

ಸಂಘದ ಅಧ್ಯಕ್ಷ ಡಾ.ಡಿ.ಅರುಣ್ ಕುಮಾರ್ ಮಾತನಾಡಿ, ಆಗಸ್ಟ್, ಸೆಪ್ಟೆಂಬರ್,ಅಕ್ಟೋಬರ್ ಮೂರು ತಿಂಗಳುಗಳ 85% ವೇತನವನ್ನು ಸರಕಾರ ಇದುವರೆಗೂ ಪಾವತಿಸಿಲ್ಲ. ಡಿಎ ಟೈಮ್ ಬಾಂಡ್, ಇಎಲ್, ಎಆರ್ ಆರ್ ಇಆರ್ ಎಸ್ ಸ್ಥಗಿತ ವೇತನ ಬಿಡುಗಡೆ ಮಾಡಬೇಕು, ಹೆಚ್ ಆರ್ ಎಂ ಎಸ್ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಎಸ್ ಆರ್ ಬುಕ್ ಗಳು 2014ರಿಂದ ಪರಿಷ್ಕರಣೆ ಆಗಿಲ್ಲ. ಅದನ್ನು ಪರಿಷ್ಕರಿಸಿ, ಎಜಿಪಿಯನ್ನು ಬಹಳಷ್ಟು ನೌಕರರಿಗೆ ಅನುಷ್ಠಾನಗೊಳಿಸಲಾಗಿಲ್ಲ. ಬೋಧಕೇತರ ಸಿಬ್ಬಂದಿಗಳ ಮುಂಬಡ್ತಿ, ಪದೋನ್ನತಿ ದೊರಕಿಲ್ಲ,  ಎಐಸಿಟಿಇ ಅಫಿಲೇಷನ್ ಆಗಿರುವುದಿಲ್ಲ, 6ನೇ ವೇತನ ಆಯೋಗ ಗೊಂದಲಗಳು ಇನ್ನೂ ಇತ್ಯರ್ಥವಾಗಿಲ್ಲ ಇವುಗಳನ್ನು ಕೂಡಲೇ ಇತ್ಯರ್ಥಪಡಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. Continued-6th day-Srijayachamarajendra-Engineering-College-Employees-protest

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಟಿ.ಮಂಜುನಾಥ್, ಕಾರ್ಯದರ್ಶಿ ಎಂ.ಸವಿತಾ, ಜಂಟಿ ಕಾರ್ಯದರ್ಶಿ ಎನ್.ಪ್ರಭುಸ್ವಾಮಿ ಇತರರು ಭಾಗವಹಿಸಿದ್ದರು.

key words  : Continued-6th day-Srijayachamarajendra-Engineering-College-Employees-protest