ಬೆಂಗಳೂರು,ಆಗಸ್ಟ್,8,2023(www.justkannada.in): ಬಾಕಿ ಬಿಲ್ ಪಾವತಿಗೆ ಕಮಿಷನ್ ಕೇಳಿದ ಆರೋಪದ ಮೇಲೆ ತಮ್ಮ ವಿರುದ್ದ ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿದ ವಿಚಾರ ಕುರಿತು ಡಿಸಿಎಂ ಡಿ.ಕೆ ಶೀವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲರಿಗೆ ದೂರು ಕೊಡಲಿ, ಸಿಎಂಗೂ ದೂರು ಕೊಡಲಿ. ನಮಗೂ ಸಾಕಷ್ಟು ವರದಿ ಬಂದಿದೆ, ನೈಜತೆ ಪರಿಶೀಲಿಸಿ ಎಂದಿದ್ದಾರೆ. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಪಾವತಿ ಮಾಡುತ್ತೇವೆ, ಹಲವು ನಕಲಿ ಬಿಲ್ ಗಳು ನನ್ನ ಗಮನಕ್ಕೆ ಗಮನಕ್ಕೆ ಬಂದಿವೆ. ಈ ಬಗ್ಗೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುತ್ತಿಗೆದಾರರು ಬ್ಲ್ಯಾಕ್ಮೇಲ್ ಅಲ್ಲ, ಪ್ರೀತಿ ತೋರಿಸುತ್ತಿದ್ದಾರೆ. ನ್ಯಾಯಬದ್ಧವಾಗಿ ಕೆಲಸ ಮಾಡಿದವರಿಗೆ ಹಣ ಸಿಗಲೇಬೇಕು ಎಂದು ತಿಳಿಸಿದರು.
Key words: Contractors – complained – Governor- DCM -DK Sivakumar.