ಬೆಂಗಳೂರು,ಅಕ್ಟೋಬರ್,13,2023(www.justkannada.in): ಗುತ್ತಿಗೆದಾರರ ಮೇಲೆ ಐಟಿ ವೇಳೆ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚರಾಜ್ಯ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಹಣ ಸಂಗ್ರಹ ಎಂದು ಬಿಜೆಪಿ ಆರೋಪಿಸಿದ್ದು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ ಪಾಟೀಲ್, ಗುತ್ತಿಗೆದಾರರ ಮೇಲೆ ದಾಳಿ ಆದರೆ ಕಾಂಗ್ರೆಸ್ ಗೆ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಗುತ್ತಿಗೆದಾರರ ಮೇಲೆ ದಾಳಿ ಆದರೆ ಕಾಂಗ್ರೆಸ್ ಗೆ ಏನು ಸಂಬಂಧ? ಸಿಎಂಗೆ ಇದನ್ನು ಲಿಂಕ್ ಮಾಡೋದಕ್ಕೆ ಬಿಜೆಪಿ ಬಳಿ ದಾಖಲೆ ಇದ್ಯಾ? ಇದು ಬಿಜೆಪಿ ಹಣ, ಜೆಡಿಎಸ್ನವರ ಹಣ ಅಂತಾ ನಾನು ಹೇಳ್ತೇನೆ. ಸಿದ್ದರಾಮಯ್ಯಗೆ ಲಿಂಕ್ ಇದೆ ಅನ್ನೋದನ್ನು ಸಾಬೀತು ಮಾಡ್ತಾರಾ? ಎಂದು ಗುಡುಗಿದರು.
ಬಿಜೆಪಿ ಸರ್ಕಾರ ಬಜೆಟ್ ಗಿಂತ ವರ್ಕ್ ಆರ್ಡರ್ ಮಾಡಿ ಹೋಗಿದ್ದಾರೆ. ಕಮಿಷನ್ ಅನ್ನೋದು ಬಿಜೆಪಿ ಹಾಗೂ ಜೆಡಿಎಸ್ ಗೆ ಚೆನ್ನಾಗಿ ಗೊತ್ತಿದೆ. ಕಮಿಷನ್ ಎನ್ನೋದು ಕಾಂಗ್ರೆಸ್ ನದ್ದಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದರು.
Key words: contractors – Congress-Minister -MB Patil – against -BJP.