ಉದಯಗಿರಿ ಗಲಭೆ ವಿವಾದಿತ ಪೋಸ್ಟ್ ಕೇಸ್ ಗೆ ಟ್ವಿಸ್ಟ್: ಅನ್ನ ಹಾಕಿದ ಧಣಿಗೆ ದ್ರೋಹ ಬಗೆದರೆ..?

ಮೈಸೂರು,ಫೆಬ್ರವರಿ,15,2025 (www.justkannada.in): ಉದಯಗಿರಿ  ಗಲಭೆ ಪ್ರಕರಣ, ಅವಹೇಳನಕಾರಿ ಪೋಸ್ಟರ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ತಿರುವು ಸಿಕ್ಕಿದೆ. ಆರೋಪಿ ಸತೀಶ್ ಅವರ ಡ್ರೈ ಫ್ರೂಟ್ಸ್ ಪ್ಯಾಕಿಂಗ್  ಅಂಗಡಿಯಲ್ಲಿ ಕೆಲಸ ಮಾಡುವವರೇ ಈ ದುಷ್ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿ ಸತೀಶ್ ಮೈಸೂರಿನ ಕಲ್ಯಾಣಗಿರಿಯಲ್ಲಿ ಪ್ಯಾಕಿಂಗ್ ಯೂನಿಟ್ ತೆರೆದಿದ್ದು, ಆ ಡ್ರೈಫ್ರೂಟ್ ಯೂನಿಟ್‌ ನಲ್ಲಿ 300 ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಆ ಪೈಕಿ ಸತೀಶ್ ಜೊತೆ ಅನ್ಯೋನ್ಯತೆಯಿಂದ ಇದ್ದವರೇ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದ್ದು, ಅನ್ನ ಹಾಕಿದ ಧಣಿಗೆ ದ್ರೋಹ ಬಗೆದರೆ..? ಎಂಬ ಅನುಮಾನ ಕಾಡುತ್ತಿದೆ.

ಸತೀಶ್ ಅವರಿಗೆ ಬೇರೆ ಕಡೆಯಿಂದ ಪೋಸ್ಟರ್ ಕಳುಹಿಸಲಾಗಿದೆ. ಬಳಿಕ ಆ ಪೋಸ್ಟರ್ ಸ್ಕ್ರೀನ್ ಶಾಟ್ ತೆಗೆದು ಜಾಲತಾಣದಲ್ಲಿ ಹಾಕಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸತೀಶ್ ಅವರ ಮೊಬೈಲನ್ನ ಕೆಲವು ಸಿಬ್ಬಂದಿಗಳು ಬಳಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿವಾದಿತ ಪೋಸ್ಟ್ ಹಿಂದೆ ಬಿದ್ದಿರುವ ಸಿಸಿಬಿ ಪೊಲೀಸರು ಇದೀಗ ಶಂಕಿತ ನೌಕರರನ್ನ ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದು ವಿವಾದಿತ ಪೋಸ್ಟ್ ಯಾರಿಂದ ,ಹೇಗೆ ಶೇರ್ ಆಗಿದೆ ಎಂಬ ಮೂಲ ಕೆದಕುತ್ತಿದ್ದಾರೆ.

Key words: myosre, Udayagiri riots, controversial post, case