ಮೈಸೂರು,ನವೆಂಬರ್,12,2024 (www.justkannada.in): ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನ ನಿಂದನೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹ್ಮದ್ ಖಾನ್, ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೇ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ನಾನು ಹೇಳಿರುವ ಉದ್ದೇಶವೇ ಬೇರೆ. ಈ ಹಿಂದೆ ನಾನು ಅವರು ಜೊತೆಯಲ್ಲಿದ್ದಾಗ ನನ್ನನ್ನು ಕುಳ್ಳ ಎನ್ನುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ. ಪ್ರೀತಿಯಿಂದ ಅವರು ಕುಳ್ಳ ಎಂದಾಗ ನಾನು ಪ್ರೀತಿಯಿಂದಲೇ ಕರಿಯಣ್ಣ ಎನ್ನುತ್ತಿದ್ದೆ. ಅದನ್ನಷ್ಟೇ ಹೇಳಿದ್ದೇನೆ. ಹೆಚ್ ಡಿ ಕುಮಾರಸ್ವಾಮಿ ಅವರ ಮೇಲೆ ನನಗೆ ಗೌರವವಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಿದ್ದರೆ ಕ್ಷಮೆ ಕೇಳಲು ನಾನು ಸಿದ್ದ ಎಂದರು.
ದೇವೇಗೌಡರ ಕುಟುಂಬ ಕೊಂಡು ಕೊಳ್ಳುತ್ತೇನೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಜಮೀರ್, ಯಾರಾದರೂ ದೇವೇಗೌಡರ ಕುಟುಂಬ ಕೊಂಡುಕೊಳ್ಳಲು ಸಾಧ್ಯವಾ ? ನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಮುಸ್ಲಿಂ ಮತಗಳ ಖರೀದಿ ಮಾಡುತ್ತೇನೆ ಎಂದಿದ್ದರು. ಅದನ್ನು ಉಲ್ಲೇಖಸಿ ನಾನು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ರಾಜೀನಾಮೆ ಕೊಡುವ ತಪ್ಪನ್ನ ನಾನೇನು ಮಾಡಿಲ್ಲ. ರಾಜೀನಾಮೆ ಕೊಡುವ ಅಗತ್ಯವೂ ಇಲ್ಲ. ನನ್ನ ಹೇಳಿಕೆಯನ್ನ ಬೇರೆ ರೀತಿ ಬಿಂಬಿಸಲಾಗಿದೆ. ನನ್ನ ಹೇಳಿಕೆಯಿಂದ ಚುನಾವಣೆ ಮೇಲೆ ಏನೂ ಪರಿಣಾಮ ಬೀರಲ್ಲ ಎಂದರು.
ನಾನು ಬಸ್ ಡ್ರೈವರ್ ಅಲ್ಲ ಮಾಲೀಕ
ನಾನು ಬಸ್ ಡ್ರೈವರಲ್ಲ ಮಾಲೀಕ. ಕುಮಾರಸ್ವಾಮಿಗಾಗಿ ಡ್ರೈವರ್ ಆಗಿದ್ದೆ ಅಷ್ಟೇ. ನಮ್ಮ ತಾತಾನ ಕಾಲದಿಂದಲೂ ನಾವು ಬಸ್ ಮಾಲೀಕರು ಎಂದು ಹೇಳುವ ಮೂಲಕ ಜೆಡಿಎಸ್ ಬಿಜೆಪಿ ನಾಯಕರ ಟೀಕೆಗೆ ಸಚಿವ ಜಮೀರ್ ಅಹಮದ್ ಖಾನ್ ತಿರುಗೇಟು ನೀಡಿದರು.
Key words: Controversial statement, HDK, Minister, Zameer Ahmed Khan