ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು ವಿವಾದ: ಮೈಸೂರು ಡಿಸಿ ವಿರುದ್ಧ ಗಂಭೀರ ಆರೋಪ ಮಾಡಿದ ನಂಜನಗೂಡು ಶಾಸಕ.

ಮೈಸೂರು,ಸೆಪ್ಟಂಬರ್,29,2021(www.justkannada.in): ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಇದೀಗ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ನಂಜನಗೂಡು ಶಾಸಕ ಹರ್ಷವರ್ದನ್ ಗಂಭೀರ ಆರೋಪ ಮಾಡಿದ್ದಾರೆ.

ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು ಮಾಡಲು ಜಿಲ್ಲಾಧಿಕಾರಿಯೇ  ಆದೇಶ ಮಾಡಿದ್ದರು ಎಂದು ಶಾಸಕ ಹರ್ಷವರ್ಧನ್  ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಹುಚ್ಚಗಣಿ ದೇವಾಲಯ ತೆರವು ಮಾಡಲು ಡಿಸಿಯಿಂದಲೇ ಆರ್ಡರ್ ಆಗಿತ್ತು. ಆದರೆ ದೇವಸ್ಥಾನ ಬೀಳಿಸುವುದು ಬೇಡವೆಂದು ಅದನ್ನು ಉಳಿಸಿಕೊಳ್ಳಲು ತಮ್ಮ ಮೇಲಾಧಿಕಾರಿಯಾದ ಮೈಸೂರು ಡಿಸಿಗೆ, ತಹಶೀಲ್ದಾರ್  ವರದಿ ಕೊಟ್ಟಿದ್ದರು.

ಆದರೆ ಜಿಲ್ಲಾಧಿಕಾರಿ ಯಾವ ಆಧಾರದ ಮೇಲೆ ದೇವಸ್ಥಾನ ಉಳಿಸುತ್ತಿರಾ? ಎಂದು ಪ್ರಶ್ನಿಸಿದ್ದರು. ಆಗ  ಜಿಲ್ಲಾಧಿಕಾರಿಯ ಈ ದಿಢೀರ್ ಪ್ರಶ್ನೆಗೆ ತಹಶೀಲ್ದಾರ್ ಬಳಿ ಉತ್ತರ ಇರಲಿಲ್ಲ.  ಎಲ್ಲಾ ಕಡೆ ದೇವಸ್ಥಾನ ತೆರವು ಮಾಡಿದ್ದೀವಿ. ಮಹದೇವಮ್ಮ ದೇವಸ್ಥಾನಕ್ಕೂ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲ. ಆದ್ದರಿಂದ ದೇವಸ್ಥಾನ ತೆರವು ಮಾಡಬೇಕು ಎಂದು ಡಿಸಿ ಆರ್ಡರ್ ಮಾಡಿದ್ದಾರೆ ಎಂದು ಹರ್ಷವರ್ಧನ್ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ ತಹಶೀಲ್ದಾರ್ ವರ್ಗಾವಣೆ ಮಾಡಿದ್ದಕ್ಕೆ ಬೇಸರವಿದೆ, ಈ ಸಂಬಂಧ ಸಿಎಂ ಜತೆ ಮಾತನಾಡುತ್ತೇನೆ ಎಂದು ಶಾಸಕ ಹರ್ಷವರ್ಧನ್ ತಿಳಿಸಿದ್ದಾರೆ.

Key words: controversy – hucchagani Mahadevamma- temple-Nanjangud MLA Harshavardan- allegations -Mysore DC.

ENGLISH SUMMARY…

Nanjangud MLA makes serious charges against Mysuru DC
Mysuru, September 29, 2021 (www.justkannada.in): The Huchchagani Mahadevamma temple eviction row has taken another turn with the Nanjangud MLA making serious charges against the Mysuru Deputy Commissioner.
The Nanjangud MLA Harshavardhan said that the Mysuru DC himself had ordered to evict the Huchchagani Mahadevamma temple in Nanjangud. However, the Tahasildar had submitted a report to the Mysuru DC requesting him to save the temple and to prevent demolition.
“But the DC questioned how and on what grounds will you save it? The tahasildar didn’t had immediately reply. The DC informed that they have evicted illegally constructed temples everywhere and even the Huchchagani Mahadevamma temple also doesn’t possess any legal documents. Hence, it should also be evicted,” the MLA alleged.
He also expressed his displeasure on transferring the tahasildar and informed that he would speak with the Chief Minister regarding that.
Keywords: Huchchagani Mahadevamma temple/demolition row/ case/ Nanjangud MLA/ charges Mysuru DC