ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆ ವಿವಾದ: 20 ಕರವೇ ಕಾರ್ಯಕರ್ತರ ವಿರುದ್ದ ಎಫ್ ಐಆರ್ ದಾಖಲು…

ಬೆಳಗಾವಿ,ಆಗಸ್ಟ್,28,2020(www.justkannada.in): ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆ ವಿವಾದಕ್ಕೆ ಸಂಬಂಧಿಸಿದಂತೆ 20 ಕರವೇ ಕಾರ್ಯಕರ್ತರ ವಿರುದ್ದ ಎಫ್ ಐಆರ್ ದಾಖಲಾಗಿದೆ.jk-logo-justkannada-logo

ಅನುಮತಿ ಇಲ್ಲದೇ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಿದ ಆರೋಪದ ಮೇಲೆ  ಬೆಳಗಾವಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಸೇರಿದಂತೆ 20 ಜನರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಿಸಲಾಗಿದೆ.controversy-statue-sangolli-rayanna-fir-against-20-karave

ದೊಂಬಿ,  ಅಕ್ರಮವಾಗಿ ಗುಂಪು ಕಟ್ಟಿದ ಆರೋಪದ ಮೇಲೆ ದೂರು ದಾಖಲಾಗಿದೆ. ಪೀರನವಾಡಿಯಲ್ಲಿ ಕರವೇ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಪ್ರತಿಷ್ಟಾಪನೆ ಮಾಡಿದ್ದರು. ಕನ್ನಡ ನೆಲದಲ್ಲಿ ವೀರ ಕನ್ನಡಿಗನ ಪ್ರತಿಮೆ ಸ್ಥಾಪನೆ ಮಾಡಿರುವುದಕ್ಕೆ ಕನ್ನಡಿಗರ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

 

Key words: Controversy – statue- Sangolli Rayanna- FIR- against-20 karave