ಬೆಂಗಳೂರು,ಡಿಸೆಂಬರ್,23,2021(www.justkannada.in): ದೇಶದಲ್ಲಿ ದಲಿತರಾಗಲಿ ಶೂದ್ರರಾಗಲಿ ಅಧಿಕಾರಕ್ಕಾಗಿ ಯಾರೂ ಮತಾಂತರವಾಗಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.
ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತು ಚರ್ಚೆಯಾಗುತ್ತಿದ್ದು ಈ ಸಂಬಂಧ ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಪಂಪ, ರನ್ನ ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಿ ಆದರೆ ಅವರು ಜೈನ ಧರ್ಮ ಸೇರಿದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ರಾಜ ಮಹಾರಾಜರು ಮತಾಂತರವಾಗಿದ್ದಾರೆ. ದೇಶದಲ್ಲಿ ದಲಿತರಾಗಲಿ ಶೂದ್ರರಾಗಲಿ ಅಧಿಕಾರಕ್ಕಾಗಿ ಯಾರೂ ಮತಾಂತರವಾಗಿಲ್ಲ ಎಂದರು.
ಮತಾಂತರದಿಂದ ಮುಸ್ಲೀಂರ ಸಂಖ್ಯೆ ಹೆಚ್ಚಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಸದನಕ್ಕೆ ಕೆಲ ಅಂಕಿ ಅಂಶ ಕೊಡುತ್ತೇನೆ. 2001ರಲ್ಲಿ ಹಿಂದೂಗಳ ಜನಸಂಖ್ಯೆ 83.86 ರಷ್ಟು ಇತ್ತು. 2011ರಲ್ಲಿ 84 ರಷ್ಟು ಆಗಿದೆ. ಹಿಂದುಗಳ ಸಂಖ್ಯೆ ಹೆಚ್ಚಾಗಿದೆ. ಮುಸ್ಲೀಮರು 2001 ರಲ್ಲಿ 12.23 ಇದ್ದರು. 2011ರಲ್ಲಿ 12.92 ಆಗಿದ್ದಾರೆ. ಕ್ರೈಸ್ತರು 2001ರಲ್ಲಿ 1.91 ಇದ್ದರು. 1.87 ಆಗಿದ್ದಾರೆ ಕ್ರೈಸ್ತರ ಸಂಖ್ಯೆ ಎಲ್ಲಿ ಹೆಚ್ಚಾಗಿದೆ ಎಂದು ಪ್ರಶ್ನಿಸಿದರು.
ತಮ್ಮ ತಾಯಿ ಮತಾಂತರ ಮಾಡಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ಈ ಸಂಬಂಧ ಎಲ್ಲಾದರೂ ಪ್ರಕರಣ ದಾಖಲಾಗಿದ್ದೇಯಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
key words: Conversion Prohibition Act-Opposition leader -Siddaramaiah