ಕೊರೋನಾ 3ನೇ ಅಲೆ ತಡೆಗೆ ಕ್ರಮ:ಎಲ್ಲಾ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲು ಸೂಚನೆ – ಸಿಎಂ ಬಸವರಾಜ ಬೊಮ್ಮಾಯಿ.

ತುಮಕೂರು,ನವೆಂಬರ್,29,2021(www.justkannada.in):  ರಾಜ್ಯದಲ್ಲಿ ಕೊರೋನಾ 3 ನೇ ಅಲೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಕೇರಳದಿಂದ ಬರವವರ ಮೇಲೆ ಹೆಚ್ಚಿನ ನಿಗಾ ವಹಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಕೊರೊನಾ 3 ನೇ ನಿಯಂತ್ರಣಕ್ಕೆ ನಿಗಾ ವಹಿಸಿದ್ದೇವೆ. ಏರ್ ಪೋರ್ಟ್ ಗಳಲ್ಲೂ ನಿಗಾವಹಿಸಲಾಗಿದೆ. ಕಂಟೇನ್ಮೆಂಟ್ ಜೋನ್ ಮಾಡಿ ನಿಯಂತ್ರಣಕ್ಕೆ ಪ್ರಯತ್ನ ಮಾಡಿದ್ದೇವೆ. ಡೆಲ್ಟಾ, ಒಮಿಕ್ರಾನ್ ತಳಿಯೇ ಎಂಬುದನ್ನು ತಿಳಿಯಲು ಕೋವಿಡ್ ಸೋಂಕಿತರ ಸ್ಯಾಂಪಲ್ ಗಳನ್ನು ಪರೀಕ್ಷೆಗಳಿ ಕಳುಹಿಸಲಾಗಿದೆ. ಶಾಲೆ, ಕಾಲೇಜುಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ಭಾರಿ ಮಳೆಯಿಂದಾಗಿ ಅಪಾರ ಹಾನಿ ಹಿನ್ನೆಲೆ, ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೆಲವು ಕಡೆಗಳಲ್ಲಿ ಪರಿಹಾರ ನೀಡಲಾಗಿದೆ. ಡಿಸಿಗಳ ಖಾತೆಯಲ್ಲಿ 685 ಕೋಟಿ ರೂ ಇದೆ. ಇನ್ನೂ ಹೆಚ್ಚಿನ ಪರಿಹಾರ ಕೊಡಲು ಸಿದ್ಧರಿದ್ದೇವೆ.  ಸಮೀಕ್ಷೆ ಕಳಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Corona- 3rd wave –action-CM -Basavaraja Bommai.

ENGLISH SUMMARY….

Steps to prevent COVID 3rd wave: CM directs to intensify vigil in all the districts
Tumakuru, November 29, 2021 (www.justkannada.in): Chief Minister Basavaraj Bommai today informed that the State Government is taking all measures to prevent the COVID 3rd wave. “We have intensified the vigil in the Kerala border,” he said.
Speaking to the press reporters after visiting the Siddaganga Math in Tumakuru today, the Chief Minister informed that a strict vigil has been kept at the airport. “We have taken all measures to create containment zone and prevent the probable onset of the COVID 3rd wave. The samples have been sent to the laboratory to confirm whether it is the Delta virus or the Omicron virus. Instructions have been given to all the schools and colleges to keep a strict vigil,” he added.
Keywords: Chief Minister/ COVID-19 3rd wave/ measures/ prevent