ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ: ಶನಿವಾರ, ಭಾನುವಾರ ಬೆಂಗಳೂರಿನಲ್ಲಿ ದೇಗುಲಗಳು ಬಂದ್.

ಬೆಂಗಳೂರು,ಆಗಸ್ಟ್,12,2021(www.justkannada.in): ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಶುರುವಾಗಿದ್ದು ಈಗಾಗಲೇ ಗಡಿಭಾಗದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ  ಶ್ರಾವಣ ಮಾಸದ ವಾರಾಂತ್ಯದ ದಿನಗಳು ಹಾಗೂ ಸಾರ್ವತ್ರಿಕ ರಜೆ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕರು ಮತ್ತು ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

ಜನರ ದಟ್ಟಣೆ ತಡೆಯುವ ಸಲುವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಈ ಆದೇಶ  ಹೊರಡಿಸಿದ್ದಾರೆ. ಶ್ರಾವಣಮಾಸದ ವೀಕೆಂಡ್ ಪೂಜೆಗೆ ಬ್ರೇಕ್ ಹಾಕಲಾಗಿದೆ. ಶನಿವಾರ, ಭಾನುವಾರ  ದೇಗುಲಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ದೇವರ ದರ್ಶನ, ವಿಶೇಷ ಪೂಜೆ, ಹೋಮ, ಹವನಗಳಿಗೆ ಬ್ರೇಕ್ ಹಾಕಲಾಗಿದ್ದು ದಿನನಿತ್ಯ ಪೂಜೆ ಎಂದಿನಂತೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.

ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಜನರು ಗುಂಪುಗೂಡುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜನರು ದೇಗುಲಗಳಿಗೆ ತೆರಳುವುದನ್ನು ಸಾಧ್ಯವಾದಷ್ಟೂಕಡಿಮೆ ಮಾಡಬೇಕು. ಕೊರೋನಾ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ.

ENGLISH SUMMARY…

Fear of COVID-19 3rd wave: Temples to be closed on weekends
Bengaluru, August 12, 2021 (www.justkannada.in): Fear of COVID-19 Pandemic 3rd wave is slowly gripping the country forcing the State Government to impose weekend curfew in the border districts. As auspicious Shravaana month has commenced the festival season has arrived. As a result, the State Government has restricted entry of devotees to the temples in Bengaluru during weekends and holidays.
This decision has been taken to avoid crowd according to Bengaluru City Deputy Commissioner J. Manjunath. As a result of this complete brakes have been applied for the Shravanamaasa weekend puja programs. Entry of devotees will be restricted during Saturdays and Sundays. However, the daily puja and other rituals will continue.
“There are all possibilities that the COVID-19 Pandemic could spread especially during this festival season, as people will crowd in public places including temples. Hence, citizens should avoid visiting temples. Strict action will be taken in cases of violation of rules,” informed, BBMP Chief Commissioner Gourav Gupta.
Keywords: Shravana maasa/ temples/ Bengaluru/ devotees entry/ restricted/ COVID-19 Pandemic/ 3rd wave/ fear

Key words: Corona- 3rd wave- horror- Temples Bandh- Bangalore -weekend