ಬೆಂಗಳೂರು,ಜೂ,12,2020(www.justkannada.in): ಬಂಧಿತ ಆರೋಪಿಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಬೆಂಗಳೂರಿನ ಸಿಸಿಬಿ ಕಚೇರಿಯನ್ನ ಬಿಬಿಎಂಪಿ ಸೀಲ್ ಡೌನ್ ಮಾಡಿದೆ.
ಖಾಸಗಿ ಕಂಪನಿಗೆ ವಂಚನೆ ಮಾಡಿದ ಆರೋಪದಡಿ ಮೂವರು ಸಹಚರರ ಜತೆ ಕೊರೋನಾ ಸೋಂಕಿತ ಆರೋಪಿಯನ್ನ ಬಂಧಿಸಲಾಗಿತ್ತು. ಈ ನಡುವೆ ಕೊರೋನಾ ಟೆಸ್ಟ್ ನಲ್ಲಿ ಓರ್ವ ಆರೋಪಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು, ಹೀಗಾಗಿ ಸಿಸಿಬಿ ಕಚೇರಿಗೆ ಸ್ಯಾನಿಟೈಸ್ ಮಾಡಿ ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಇತಿಹಾಸದಲ್ಲಿ ಇದೇ ಮೊದಲಿಗೆ ಸಿಸಿಬಿ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದೆ.
ಹಾಗೆಯೇ ಸೋಂಕಿತ ಆರೋಪಿಯನ್ನ ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಇಬ್ಬರು ಇನ್ಸ್ ಪೆಕ್ಟರ್ ಹಾಗೂ 7 ಪೊಲೀಸ್ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ. ಹಾಗೆಯೇ ಬಂಧಿತ ಆರೋಪಿಯ ದ್ವಿತೀಯ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಗಂಟಲು ದ್ರವ ಸಂಗ್ರಹಿಸಿ ಕೊರೋನಾ ಟೆಸ್ಟ್ ಕಳಿಸಲಾಗುತ್ತಿದೆ.
Key words: Corona – accused-CCB Office -Seal Down- Bangalore.