ಬೆಂಗಳೂರು,ಡಿಸೆಂಬರ್,23,2020(www.justkannada.in): ನಿಗದಿಯಂತೆ ಜನವರಿ 1ರಿಂದಲೇ ಶಾಲೆ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿರುವ ಸಚಿವ ಸುರೇಶ್ ಕುಮಾರ್, ಜನವರಿ 1ರಿಂದ ಶಾಲೆ ಆರಂಭವಾಗಲಿದೆ. ಹೊಸ ಪ್ರಭೇದ ಕೊರೋನಾ ವೈರಸ್ ಬಗ್ಗೆ ತಜ್ಞರ ಜತೆ ಚರ್ಚಿಸಿದ್ದೇನೆ. ಕೊರೋನಾ ರೂಪಾಂತರ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಹೊಸ ವೈರಸ್ ಎದುರಿಸುವ ಶಕ್ತಿ ನಮ್ಮಲ್ಲಿದೆ. ತಜ್ಞರ ಸಮಿತಿ ಮಾರ್ಗದರ್ಶನದಂತೆ ಮುಂದುವರೆಯುತ್ತೇವೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಜನವರಿ 1ರಿಂದ ಮತ್ತೆ ಆರಂಭಗೊಳ್ಳಲಿರುವ ಹಿನ್ನೆಲೆ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ಮತ್ತು ಜಿಲ್ಲಾಡಳಿತದ ಜೊತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಇಂದು ವಿಡಿಯೊ ಸಂವಾದ ನಡೆಸಲಿದ್ದಾರೆ.
english summary….
New Corona virus panic: Education Minister Suresh Kumar clarifies on commencing of schools
Bengaluru, Dec. 23, 2020 (www.justkannada.in): Primary and High School Education Minister Suresh Kumar today clarified that schools would begin from January 1, as announced earlier.
Speaking in Bengaluru today, he said, “We have already discussed the new corona virus strain with experts, and there is no need to panic. We have the expertise to face it as per the doctors. We will continue as per the guidance of the expert committee,” he said.
Minister Suresh Kumar will conduct a video conferencing with the CEOs of all the district and district administration regarding the commencement of schools for SSLC and 2nd PUC students from January 1.
Keywords: Schools from Jan. 1/ Minister Suresh Kumar/ No need to panic
Key words: Corona -adaptation –anxiety-Education Minister- Suresh Kumar – January 1-school-start