ಮೈಸೂರು,ಜು,7,2020(www,justkannada.in): ಮೈಸೂರು ಜಿಲ್ಲೆಯಲ್ಲಿ ರಣಕೇಕೆ ಹಾಕುತ್ತಿರುವ ಮಹಾಮಾರಿ ಕೊರೋನಾ ಇದೀಗ ಮೈಸೂರು ಮಹಾನಗರ ಪಾಲಿಕೆಗೆ ಕಾಲಿಟ್ಟಿದೆ. ಇಲ್ಲಿನ ಪಾಲಿಕೆ ಸಿಬ್ಬಂದಿಗೆ ಕೊರೋನಾ ಸೋಂಕಿರುವುದು ದೃಢವಾಗಿದೆ.
ಮೈಸೂರು ಪಾಲಿಕೆ ಹೆಲ್ತ್ ಸೆಕ್ಷನ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದ್ದು ಪಾಲಿಕೆ ಆರೋಗ್ಯ ವಿಭಾಗ ಸೀಲ್ ಡೌನ್ ಆಗುವ ಸಾಧ್ಯತೆ ಇದೆ. ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆ ಪಾಲಿಕೆ ಸಿಬ್ಬಂದಿ ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.
ಪಾಲಿಕೆಗೂ ಮಹಾಮಾರಿ ಲಗ್ಗೆ ಇಟ್ಟ ಹಿನ್ನೆಲೆ ಪಾಲಿಕೆ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದ್ದು, ಸೋಂಕಿತ ಸಿಬ್ಬಂದಿ ನಿಕಟ ಸಂಪರ್ಕದಲ್ಲಿದ್ದವರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
Key words: Corona-attack- mysore –city corporation- staff.