ಬೆಂಗಳೂರು,ಮೇ,13,2021(www.justkannada.in): ಕೊರೋನಾ ನಿಯಂತ್ರಣಕ್ಕೆ ಮೇ,24ರವರೆಗೆ ಕಠಿಣ ನಿಯಮ ಜಾರಿ ಮಾಡಲಾಗಿದೆ. ಹೀಗಾಗಿ ರಾಜದಲ್ಲಿ ಕೊರೋನಾ ಕೇಸ್ ಪ್ರಮಾಣ ಇಳಿಕೆಯಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಲಾಕ್ ಡೌನ್ ನಂತ್ರ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿದೆ. ಆಕ್ಸಿಜನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಈಗ ರಾಜ್ಯದಲ್ಲಿ ಇರುವಂತ ಕೊರೋನಾ ಲಸಿಕೆಯನ್ನು ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆಯಾಗಿ ನೀಡಲಾಗುತ್ತದೆ. 18 ರಿಂದ 44 ವರ್ಷದವರಿಗೆ ಲಸಿಕೆ ನೀಡೋದಕ್ಕೆ ಸದ್ಯಕ್ಕೆ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮೇ.5ರಂದು 26 ಸಾವಿರಕ್ಕೂ ಹೆಚ್ಚು ಇತ್ತು. ನಿನ್ನೆಗೆ 16 ಸಾವಿರಕ್ಕೆ ಆ ಸಂಖ್ಯೆ ಇಳಿಕೆಯಾಗಿದೆ. ಪ್ರಾರಂಭದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕೇವಲ ಏರುಗತಿಯಲ್ಲಿದ್ದಂತ ಬೆಂಗಳೂರು, ಕಲಬುರ್ಗಿಯಲ್ಲಿ, ಪ್ರಕರಣಗಳ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ಆರೋಗ್ಯ ಇಲಾಖೆಯ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 1970 ಬೆಡ್, 600ಕ್ಕೂ ಹೆಚ್ಚು ವೆಂಟಿಲೇಟರ್ ಸೌಲಭ್ಯ ಇತ್ತು. ಈಗ ಇವುಗಳನ್ನು ಮತ್ತಷ್ಟು ಹೆಚ್ಚು ಮಾಡಲಾಗಿದೆ. ಈಗ 26 ಸಾವಿರದಷ್ಟು ಆಕ್ಸಿಜನ್ ಬೆಡ್ 1145 ಐಸಿಯು, 2019 ವೆಂಟಿಲೇಟರ್, 1248 ಹೆಚ್ ಎಸ್ ಸಿ ಬೆಡ್ ಸೌಲಭ್ಯವಿದೆ ಎಂದರು.
ಈವರೆಗೆ 7.5 ಲಕ್ಷ ಕೋವಿಶೀಲ್ಡ್ 1.44 ಲಕ್ಷ ಕೋವ್ಯಾಕ್ಸಿನ್ ಸೇರಿದಂತೆ 8.14 ಲಕ್ಷ ಕೊರೋನಾ ಲಸಿಕೆ ಖರೀದಿಸಲಾಗಿದೆ. ಮೊದಲ ಡೋಸ್ ಲಸಿಕೆ ನಡೆದ ನಂತ್ರ, ಎರಡನೇ ಡೋಸ್ ಲಸಿಕೆ ನೀಡೋದಕ್ಕೆ ಈಗ ಇರುವಂತ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ 18 ರಿಂದ 44 ವರ್ಷದವರಿಗೆ ಕೊರೋನಾ ಲಸಿಕೆ ನೀಡಿಕೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
Key words: Corona case- declines -due – stringent action – state-CM- BS Yeddyurappa.