ಬೆಂಗಳೂರು, ಡಿಸೆಂಬರ್ 19, 2021 (www.justkannada.in): ಕ್ರಿಸ್ಮಸ್ ನ ಎರಡು ವಾರಗಳ ನಂತರ ಲಾಕ್ ಡೌನ್ ಜಾರಿಗೊಳಿಸಲು ಬ್ರಿಟನ್ ಸರ್ಕಾರ ಯೋಜಿಸುತ್ತಿದೆ ಎನ್ನಲಾಗಿದೆ.
ಕೋವಿಡ್-19 ತಡೆಗೆ ವೈಜ್ಞಾನಿಕ ಸಲಹಾ ಗುಂಪು, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಮುಂದೆ ಇರಿಸಲಾದ ಹಲವಾರು ಪ್ರಸ್ತಾಪಗಳಲ್ಲಿ ಎರಡು ವಾರಗಳ ಲಾಕ್ ಡೌನ್ ಶಿಫಾರಸು ಮಾಡಿದೆ ಎಂಬ ವರದಿ ಹೊರಬಿದ್ದಿದೆ.
ಬ್ರಿಟನ್ ನಲ್ಲಿ ಗುರುವಾರ 88,376, ಶುಕ್ರವಾರ 93,045 ಪ್ರಕರಣಗಳು ಕಂಡುಬಂದಿವೆ. ಲಂಡನ್ ನಲ್ಲಿ ಶುಕ್ರವಾರ ಒಂದೇ ದಿನ 26,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಒಂದೇ ದಿನ 26,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವುದರಿಂದ ನಗರ ಮೇಯರ್ ಸಾದಿಕ್ ಖಾನ್ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಒಂದೆಡೆ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮತ್ತೊಂದು ಕಡೆ ಸಿಬ್ಬಂದಿ ಕೊರತೆ ತೀವ್ರವಾಗುತ್ತಿದೆ. ಜೊತೆಗೆ ಲಂಡನ್, ಸ್ಕಾಟ್ಲೆಂಡ್ ಗಳಲ್ಲಿ ಅತಿ ಹೆಚ್ಚು ಓಮಿಕ್ರಾನ್ ಪ್ರಕರಣಗಳು ವರದಿಯಾಗುತ್ತಿವೆ.