ನವದೆಹಲಿ,ಏಪ್ರಿಲ್,24,2021(www.justkannada.in): ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿನ ಪ್ರಮಾಣವನ್ನ ತಗ್ಗಿಸಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು ಇದೀಗ ಇದೇ ವಿಚಾರದಲ್ಲಿ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದೆ.
ಹೌದು, ವೈದ್ಯಕೀಯ ಉಪಕರಣಗಳ ಮೇಲಿನ ಸುಂಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೇಶದಲ್ಲಿ ಆಮ್ಲಜನಕ ಲಭ್ಯತೆಯನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರವನ್ನು ಇಂದು ಕೈಗೊಳ್ಳಲಾಗಿದೆ.
ಕೊರೋನಾ ವ್ಯಾಕ್ಸಿನ್, ಆಕ್ಸಿಜನ್ ಸಂಬಂಧಿತ ಸಲಕರಣೆಗಳ ಮೇಲೆ ಕಸ್ಟಮ್ಸ್ ಸುಂಕವನ್ನ ಮನ್ನಾ ಮಾಡಿದೆ. ಕೋವಿಡ್ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರ ಆಮ್ಲಜನಕ ಸರಬರಾಜು, ಲಸಿಕೆಗಳ ಅಮದಿಗೂ ಸುಂಕ ಕಡಿತ ಮಾಡಿದೆ. ಇನ್ನು ಸೀಮಾ ಸುಂಕದಿಂದ ಕೊರೊನಾ ವ್ಯಾಕ್ಸಿನ್‌ಗೆ ವಿನಾಯಿತಿ ನೀಡಿದ್ದು, ಆಮಧಿಗೆ ವಿಧಿಸಲಾಗುತ್ತಿದ್ದ ಹೆಲ್ತ್ ಸೆಸ್ ಕೂಡ ರದ್ದು ಮಾಡಿದೆ. 3 ತಿಂಗಳವರೆಗೆ ತೆರಿಗೆ ವಿನಾಯಿತಿ ನೀಡಿ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.
Key words: corona- control-central government-mandate -tariff -reduction -medical equipment.