ಗ್ರಾಮೀಣ ಭಾಗದಲ್ಲಿ ಕೊರೋನಾ ನಿಯಂತ್ರಣಕ್ಕೆ ಶ್ರಮವಹಿಸಿ- ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ…

ನವದೆಹಲಿ,ಮೇ,18,2021(www.justkannada.in): ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕೊರೋನಾ ನಿಯಂತ್ರಿಸಲು ಶ್ರಮ ವಹಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದರು.jk

ಕೊರೊನಾ ನಿರ್ವಹಣೆ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಹಲವು ರಾಜ್ಯಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದು, ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶಾದ್ಯಂತ ಆಕ್ಸಿಜನ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.  ಪ್ರಧಾನಿ ಮೋದಿಯ ನೇತೃತ್ವದಲ್ಲಿ  ಆಕ್ಸಿಜನ್ ಸಮಸ್ಯೆ ಸಮರ್ಥವಾಗಿ ನಿಭಾಯಿಸಿದ್ದೇವೆ. ಜಗತ್ತಿನ ಆನೇಕ ರಾಷ್ಟ್ರಗಳು ನಮಗೆ ಆಕ್ಸಿಜನ್ ಪೂರೈಕೆ ಮಾಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿ ಆಕ್ಸಿಜನ್ ಸಮಸ್ಯೆ ಸಮರ್ಥವಾಗಿ ಎದುರಿಸಿದ್ದೇವೆ ಎಂದರು.corona-control-rural-union-home-minister-amit-shah-instructed-meeting-dc

ಕೆಲವು ರಾಜ್ಯಗಳಲ್ಲಿ ಗ್ರಾಮೀಣ ಭಾಗದಲ್ಲಿ  ಹೆಚ್ಚು ಕೊರೋನಾ ಪ್ರಕರಣ ಕಂಡು ಬರುತ್ತಿವೆ. ಗ್ರಾಮೀಣ ಭಾಗದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಇದು ನಮಗೆ ಸವಾಲಾಗಿದೆ. ಟೆಸ್ಟಿಂಗ್ ಟ್ರ್ಯಾಕಿಂಗ್ ಟ್ರೀಟ್ ಮೆಂಟ್ ಸಮರ್ಪಕವಾಗಿ ಮಾಡಬೇಕಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಶ್ರಮ ವಹಿಸಿ ಎಂದು ಅಮಿತ್ ಶಾ ತಿಳಿಸಿದರು.

ENGLISH SUMMARY…

Union Home Minister Amit Shah asks DCs to make efforts to control COVID-19 Pandemic in rural areas
New Delhi, May 18, 2021 (www.justkannada.in): Prime Minister Narendra Modi today addressed a virtual meeting of the Deputy Commissioners of the districts where the COVID-19 Pandemic is spreading swiftly in the states.
Deputy Commissioners’ of 17 districts of Karnataka took part in the meeting. In the meeting, Union Home Minister Amit Shah explained that the oxygen shortage had been fulfilled under the leadership of Prime Minister Narendra Modi. Several countries have provided oxygen and the Govt. of India is handling the 2nd wave of the COVID-19 Pandemic effectively.corona-control-rural-union-home-minister-amit-shah-instructed-meeting-dc
“The pandemic is spreading swiftly in rural areas in several states and it is a challenge to handle it. I request you to expedite and manage testing, tracking, and treatment process and handle it efficiently to bring the pandemic under control,” he added.
Keywords: Union Home Minister/ Amit Shah/ COVID-19 Pandemic/ virtual meeting/ 17 Deputy Commissioners of Karnataka take part/ control pandemic in rural areas

Key words: corona- control – rural -Union Home Minister -Amit Shah -instructed – meeting -DC