ದೇಶದಲ್ಲಿ ಇಳಿಕೆ ಕಂಡ ಕೊರೋನಾ: ಹೊಸದಾಗಿ 50 ಸಾವಿರ ಕೋವಿಡ್ ಪ್ರಕರಣಗಳು ಪತ್ತೆ.

ನವದೆಹಲಿ,ಜೂನ್,23,2021(www.justkannada.in):  ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು 2 ಲಕ್ಷ ದಾಟುತ್ತಿದ್ದ ದಿನದ ಪ್ರಕರಣ ಈಗ 50 ಸಾವಿರಕ್ಕೆ ಬಂದು ಇಳಿದಿದೆ.jk

ಹೌದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 50,848 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.  ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 50,848 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,00,28,709 ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ 1,358 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ, ಈ ಮೂಲಕ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 3,90,660 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,43,194 ಕ್ಕೆ ಇಳಿದಿದೆ; 82 ದಿನಗಳಲ್ಲಿ ಕಡಿಮೆ. ಚೇತರಿಕೆ ದರವು 96.56% ಗೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ENGLISH SUMMARY….

50,000 new Corona cases reported in the country
New Delhi, June 23, 2021 (www.justkannada.in): The number of corona cases is declining in the country. The numbers which were usually above two lakh has reduced to 50,000 in a day now.
50,848 new cases have been reported in the last 24 hours as per the information provided by the Union Health Ministry. The total number of the pandemic has increased to 3,00,28,709.
1,358 people have lost their lives due to the pandemic in the last 24 hours, increasing the total tally to 3,90,660. Presently the total number of active cases in the country has declined to 6,43,194 which is the lowest in the last 82 days. The recovery percentage has increased to 96.56%.
Keywords: Coronavirus/ COVID-19 Pandemic/ numbers decline

Key words: Corona-declined in –country-Newly- 50 thousand- Covid -cases.