ಬೆಂಗಳೂರು,ಡಿಸೆಂಬರ್,30,2020(www.justkannada.in): ರಾಜ್ಯದಲ್ಲಿ ಬ್ರಿಟನ್ ಹೊಸ ಕೊರೋನಾ ರೂಪಾಂತರ ಪತ್ತೆಯಾಗಿದ್ದು ಮತ್ತೆ ಕೋವಿಡ್-19 ಆತಂಕ ಶುರುವಾಗಿದೆ. ಈ ಮಧ್ಯೆ ಜನವರಿ 1ರಿಂದ ಶಾಲಾ-ಕಾಲೇಜು ಆರಂಭಕ್ಕೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನ ಬದಲಿಸುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ನಿಗದಿಯಂತೆ ಶಾಲಾ-ಕಾಲೇಜು ಆರಂಭವಾಗಲಿವೆ.ರೂಪಾಂತರ ಕೊರೋನಾದಿಂದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಜನವರಿ 1 ರಿಂದ ಶಾಲಾ-ಕಾಲೇಜು ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಶಾಲೆಗೆ ಮಕ್ಕಳನ್ನ ಕಳುಹಿಸಲು ಒತ್ತಾಯವಿಲ್ಲ. ಒಂದು ತರಗತಿಗೆ 15 ವಿದ್ಯಾರ್ಥಿಗಳು ಇರುತ್ತಾರೆ. ಆರೋಗ್ಯ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳು ಇರುತ್ತವೆ. ಹಾಗೆಯೇ ಶಿಕ್ಷಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ತಿಳಿಸಿದರು.
English summary….
Fear of new Coronavirus variant: Education Minister Suresh Kumar clarifies on opening of schools
Bengaluru, Dec. 30, 2020 (www.justkannada.in): Identification of the new Coronavirus variant has triggered fear among the citizens across the state. However, Primary and Secondary Education Minister Suresh Kumar today clarified that the classes for 10th standard and 2nd PUC would commence from January 1 as scheduled earlier, and there will be no changes.
Stating that there is no need for fear as per experts, he said however students have to produce consent letters from parents compulsorily. He said instructions are given to the schools to accommodate only 15 students in each classroom, and teachers should also mandatorily possess Corona Negative reports.
Keywords: Schools to begin from January 1/ No change/ Minister Suresh Kumar
Key words: Corona – Education Minister -Suresh Kumar- clarifies – start – school