ಮೈಸೂರು,ಮಾ,20,2020(www.justkannada.in): ಮಹಾಮಾರಿ ಕೊರೋನಾ ವೈರಸ್ ಎಫೆಕ್ಟ್ ಬೀದಿಬದಿ ವ್ಯಾಪಾರಿಗಳಿಗೆ ತಟ್ಟಿದ್ದು ಕರೋನ ಭೀತಿಯಿಂದ ವ್ಯಾಪರವಿಲ್ಲದೆ ಬೀದಿಬದಿಗಳು ಕಂಗಾಲಾಗಿದ್ದಾರೆ. ಈ ನಡುವೆ ಕಾಣದ ಕರೋನಗಿಂತ ಫೈನಾನ್ಸ್ ಸಂಸ್ಥೆಗಳಿಂದ ರೋಸಿಹೋದ ವ್ಯಾಪಾರಸ್ಥರು ಸರ್ಕಾರದ ಮೊರೆ ಹೋಗಿದ್ದಾರೆ.
ಕೊರೋನಾ ಭೀತಿಯಿಂದ ವ್ಯಾಪಾರವಿಲ್ಲ. ಸಾಲ ಕಟ್ಟೊಕೂ ಆಗ್ತಿಲ್ಲ. ಸಾಲ ಕಟ್ಟದಿದ್ದಕ್ಕೆ ಮನೆ ಮುಂದೆ ಬಂದು ಫೈನಾನ್ಸ್ ಸಂಸ್ಥೆಯವರು ಮಾನ ಹರಾಜು ಹಾಕ್ತಾರೆ ಎಂದು ಬೀದಿ ಬದಿ ವ್ಯಾಪರಿಗಳು ಹಾಗೂ ದಿನಗೂಲಿ ಮಹಿಳೆಯರು ತಮ್ಮ ಗೋಳು ವ್ಯಕ್ತಪಡಿಸಿದ್ದಾರೆ.
ಕರೋನ ಭೀತಿ ವ್ಯಾಪರವಿಲ್ಲ ಸಾಲ ಮರುಪಾವತಿಗೆ ಕಾಲಾವಕಾಶ ನೀಡುವಂತೆ ಬೀದಿಬದಿ ವ್ಯಾಪಾರಿಗಳು ಸರ್ಕಾರದ ಬಳಿ ಅಳಲು ತೋಡಿಕೊಂಡಿದ್ದಾರೆ. ಪೈನಾಸ್ಸ್ ಸಂಸ್ಥೆಗಳು ಸಾಲಮರುಪಾವತಿ ಮಾಡುವಂತೆ ದಮ್ಕಿ ಹಾಕುತ್ತಿದ್ದು ಕಾಣದ ಕರೋನಗಿಂತ ಕಾಡುವ ಫೈನಾನ್ಸ್ ಸಂಸ್ಥೆಗಳಿಂದ ವ್ಯಾಪಾರಸ್ಥರು ರೋಸಿಹೋಗಿದ್ದು, ಹೀಗಾಗಿ ಕೂಡಲೇ ಫೈನಾನ್ಸ್ ಸಂಸ್ಥೆಗಳು ಕಾಲಾವಕಾಶ ನೀಡುವಂತೆ ಸರ್ಕಾರ ಸೂಚಿಬೇಕು. ತಿಂಗಳ ಕಂತು, ವಾರದ ಕಂತುಗಳನ್ನು ಮುಂದೂಡಿ ಬಡ್ಡಿಮನ್ನಾ ಮಾಡಿಸಬೇಕು ಎಂದು ಬೀದಿಬದಿ ವ್ಯಾಪಾರಿಗಳು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Key words: Corona Effect-appeal – government – troubled- street -trader