ಬೆಂಗಳೂರು,ಮಾ,16,2020(www.justkannada.in): ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆ ಇಂದಿನಿಂದಲೇ ನಗರದಲ್ಲಿನ ಎಲ್ಲಾ ಎಸಿ ಸೂಪರ್ ಮಾರ್ಕೆಟ್ಗಳನ್ನು (ಹವಾನಿಯಂತ್ರಿತ) ಬಂದ್ ಮಾಡುವಂತೆ ಬಿಬಿಎಂಪಿ ಆದೇಶಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಕೊರೋನಾ ಭೀತಿ ಹಿನ್ನೆಲೆ ನಗರದಲ್ಲಿ ಎಸಿ ಅಳವಡಿಸಿರುವ ಸೂಪರ್ ಮಾರ್ಗೆಟ್ ಗಳನ್ನ ಬಂದ್ ಮಾಡುವಂತೆ ಆದೇಶಿಸಲಾಗಿದೆ. ಒಂದು ವೇಳೆ ಸೂಪರ್ ಮಾರ್ಕೆಟ್ ಕ್ಲೋಸ್ ಮಾಡದಿದ್ದರೇ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಪಾಲಿಕೆ ಆದೇಶ ಉಲ್ಲಂಘಿಸಿದರೆ ಕೆಎಂಸಿ ಕಾಯ್ದೆಯಡಿ ಇರುವ ಅಧಿಕಾರ ಬಳಸಿಕೊಂಡು ಪರವಾನಗಿ ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.
ಶಾಲಾ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳು, ಮದುವೆ ಬಿಟ್ಟು ಉಳಿದ ಕಾರ್ಯಕ್ರಮಗಳನ್ನ ರದ್ಧು ಮಾಡುವಂತೆ ಸೂಚನೆ ನೀಡಲಾಗದೆ. ಮದುವೆ ಕಾರ್ಯಕ್ರಮಕ್ಕೆ ನೂರಕ್ಕಿಂತ ಹೆಚ್ಚು ಜನರು ಸೇರಬಾರದು. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ ಎಂದು ಮಂಜುನಾಥ ರಾಜು ತಿಳಿಸಿದರು.
ಹಾಗೆಯೇ ವಿದೇಶದಿಂದ ಬರುವವರಿಗೆ ತಪಾಸಣೆ ಮಾಡಲು ಬಿಬಿಎಂಪಿಯಿಂದ ಏರ್ ಪೋರ್ಟ್ ನಲ್ಲಿ ನಾಲ್ವರು ಆರೋಗ್ಯ ಅಧಿಕಾರಿಗಳನ್ನ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
Key words: Corona effect- BBMP -AC supermarket -bandh.