ಮುಂಬೈ,ಮಾ,13,2020(www.justkannada.in): ವಿಶ್ವದಲ್ಲೇ ಭಾರಿ ಆತಂಕ ಸೃಷ್ಠಿಸಿರುವ ಕೊರೋನಾ ಹೊಡೆತಕ್ಕೆ ಷೇರು ಮಾರುಕಟ್ಟೆ ನಡುಗಿದೆ. ಕೊರೋನಾ ಎಫೆಕ್ಟ್ ನಿಂದಾಗಿ ಷೇರುಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದ್ದು ಇಂದು ಸೆನ್ಸೆಕ್ಸ್ 3000 ಪಾಯಿಂಟ್ ಗಳಷ್ಟು ಕುಸಿದಿದ್ದು, ಮತ್ತಷ್ಟು ಪಾತಾಳಕ್ಕಿಳಿಯುವುದನ್ನು ತಪ್ಪಿಸಲು 45 ನಿಮಿಷಗಳ ಕಾಲ ವ್ಯವಹಾರವನ್ನೇ ಸ್ಥಗಿತಗೊಳಿಸಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿನಲ್ಲೇ ಕುಸಿತ ಕಂಡಿದ್ದು ಒಂದೇ ನಿಮಿಷಕ್ಕೆ 12 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಷೇರು ಮಾರುಟ್ಟೆಯಲ್ಲಿನ ಈ ಬೆಳವಣಿಗೆಯಿಂದ ಹೂಡಿಕೆದಾರರು ಕಂಗಾಲಾಗಿದ್ದು, ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಕರೋನಾ ವೈರಸ್ ಹೆಮ್ಮಾರಿಯ ಪ್ರಭಾವ ಷೇರು ಮಾರುಕಟ್ಟೆ ಮೇಲಾಗಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಕಳೆದ ಮೂರು ದಿನಗಳ ವಹಿವಾಟಿನಲ್ಲಿ 30 ಲಕ್ಷಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
Key words: Corona Effect- Decline -stock market.