ಮೈಸೂರು,ಮಾ,17,2020(www.justkannada.in): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗಿದ್ದು ಕೊರೋನಾ ಶಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಕೊರೋನಾ ಶಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು ಒಟ್ಟು 44 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ ಭೀತಿ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಇಂದಿನಿಂದ ಕುಕ್ಕರಹಳ್ಳಿ ಕೆರೆ, ಮಾನಸ ಗಂಗೋತ್ರಿಗೆ ಪ್ರವೇಶ ನಿಷೇಧ ಹೇರಲಾಗಿದೆ. ಮಾನಸ ಗಂಗೋತ್ರಿಗೆ ಪ್ರವೇಶ ನಿಷೇಧಿಸಿ ಮೈಸೂರು ವಿವಿ ಕುಲಪತಿ ಪ್ರೊ.ಜಿ ಹೇಮಂತ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಕುಕ್ಕರಹಳ್ಳಿ ಕೆರೆಗೆ ವಾಕಿಂಗ್ ಮಾಡಲು ಹೆಚ್ಚಿನ ಜನರ ಆಗಮಿಸುವ ಹಿನ್ನೆಲೆ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಾಕಿಂಗ್ ಬಾರದಂತೆ ಮನವಿ ಮಾಡಲಾಗಿದೆ. ಕೊರೋನಾ ಭೀತಿಯಿಂದಾಗಿ ಈಗಾಗಲೆ ಮಾಲ್, ಪಬ್ ಮಲ್ಟಿಫೆಕ್ಸ್ ಗಳು ಬಂದ್ ಆಗಿದ್ದು , ಈ ನಡುವೆ ವಾಯವಿಹಾರ ತಾಣವಾದ ಲಿಂಗಾಬುದ್ದಿ ಕೆರೆ ಸೇರಿ ಎಲ್ಲಾ ಪ್ರವಾಸಿ ತಾಣಗಳನ್ನ ಬಂದ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.
ಮೈಸೂರು ವಿಶ್ವ ವಿದ್ಯಾನಿಲಯಯದ ಶತಮಾನದ ಘಟಿಕೋತ್ಸವ ಮುಂದೂಡಿಕೆ….
ಕೊರೋನ ಭೀತಿ ಹಿನ್ನೆಲೆ. ಮೈಸೂರು ವಿಶ್ವ ವಿದ್ಯಾನಿಲಯಯದ ಶತಮಾನದ ಘಟಿಕೋತ್ಸವ ಮುಂದೂಡಿಕೆ ಮಾಡಲಾಗಿದೆ. ಮಾರ್ಚ ತಿಂಗಳಲ್ಲಿ ನಡೆಯಬೇಕಿದ್ಧ ನೂರನೇ ಘಟಿಕೋತ್ಸವ ಕಾರ್ಯಕ್ರಮವನ್ನ ಮುಂದೂಡಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನ ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್ ಆಹ್ವಾನಿಸಿದ್ಧರು. ಮೊದಿ ದಿನಾಂಕ್ಕಾಗಿ ಕಾದಿದ್ದರು. ಆದರೆ ಈಗ ಕರೋನಾ ಭೀತಿ ಇರುವ ಹಿನ್ನೆಲೆ ಸಮಾರಂಭವನ್ನ ಮೇ ಮಾಹೆಗೆ ಮುಂದೂಡಿಕೆ ಮಾಡಲಾಗಿದೆ.
Key words: corona effect- Kukkarahalli Lake- Manasa Gangothri- Access -Prohibition