ಮೈಸೂರು,ಮಾ,10,2020(www.justkannada.in): ಮಹಾಮಾರಿ ಕೊರೋನಾ ವೈರಸ್ ಭೀತಿ ಇದೀಗ ಮೈಸೂರಿನ ಚಾಮುಂಡಿಬೆಟ್ಟಕ್ಕೂ ತಟ್ಟಿದ್ದು ಕೋವಿಡ್ ವೈರಸ್ ಭೀತಿ ಹಿನ್ನಲೆ, ಚಾಮುಂಡಿ ಬೆಟ್ಟದಲ್ಲಿ ಕೊರೋನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆ ಚಾಮುಂಡಿ ಬೆಟ್ಟದ ಹಲವು ಕಡೆಗಳಲ್ಲಿ ಆರೋಗ್ಯ ಇಲಾಖೆ ಕೊರೋನಾ ಜಾಗೃತಿ ಫ್ಲೇಕ್ಸ್ ಹಾಕಿದೆ. ಕೊರೋನ ಬಗ್ಗೆ ಭಯ ಬೇಡ ಮುನ್ನೆಚ್ಚರಿಕೆ ಇರಲಿ ಎಂಬ ಸಂದೇಶದೊಂದಿಗೆ ಫ್ಲೆಕ್ಸ್ ಅಳವಡಿಕೆ ಮಾಡಿದೆ.
ದೇವಸ್ಥಾನದ ಪ್ರಧಾನ ಆರ್ಚಕ ಶಶಿಶೇಖರ್ ದೀಕ್ಷಿತ್ ಈ ಬಗ್ಗೆ ಮಾತನಾಡಿದ್ದು, ಭಕ್ತರ ಆಗಮನದಲ್ಲಿ ಯಾವುದೇ ಏರುಪೇರು ಆಗಿಲ್ಲ, ಸದ್ಯಕ್ಕೆ ಪ್ರತಿನಿತ್ಯದಂತೆ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಕೊರೋನ ಭೀತಿ ಹಿನ್ನಲೆ ಮೈಸೂರಿನ ಸಚ್ಚಿದಾನಂದ ಆಶ್ರಮಕ್ಕೆ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿತ್ತು.
Key words: Corona – effect-Mysore- Chamundi hill – Awareness- Health Department.