ಮೈಸೂರು,ಜು,15,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಇಂದು ಸಹ 140ಕ್ಕೂ ಹೆಚ್ಚು ಕೊರೋನಾ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಮೈಸೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ 151 ಕೇಸ್ ಮತ್ತು ನಿನ್ನೆ 125 ಕೊರೋನಾ ಪ್ರಕರಣ ಪತ್ತೆಯಾಗಿತ್ತು. ಇದೀಗ ಇಂದು ಸಹ ಮೈಸೂರಿನಲ್ಲಿ ಕೊರೊನಾ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಸತತ ಮೂರನೇ ದಿನ 100ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ.
ನಗರದ ವಿವಿ ಪುರಂ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ, ಸಾತಗಳ್ಳಿ ಬಸ್ ಡಿಪೋ ಸಿಬ್ಬಂದಿಗೆ, ಮೈಸೂರು ಮೆಡಿಕಲ್ ಕಾಲೇಜು ಪಿಜಿ ಹಾಸ್ಟೆಲ್ ವೈದ್ಯರೊಬ್ಬರಿಗೆ, ಮೈಸೂರು ಮೆಡಿಕಲ್ ಕಾಲೇಜು ವೈದ್ಯಕೀಯ ವಿದ್ಯಾರ್ಥಿಗೂ ಸೋಂಕು ತಗುಲಿದೆ.
ಇನ್ನು ನರಸಿಂಹರಾಜ ಕ್ಷೇತ್ರದಲ್ಲೂ ಮಹಾಮಾರಿ ಅಟ್ಟಹಾಸ ಮುಂದುವರೆದಿದ್ದು, ನಗರದ ಹೃದಯ ಭಾಗದಲ್ಲಿ ಪಾಸಿಟಿವ್ ಕೇಸ್ಗಳು ಹೆಚ್ಚಾಗಿವೆ. ಮಂಡಿಮೊಹಲ್ಲಾ, ಉದಯಗಿರಿ, ಕೆ.ಆರ್ ಮೊಹಲ್ಲಾ, ಬೋಗಾದಿ, ಶಾಂತಿನಗರ, ಹೆಬ್ಬಾಳ್, ಕಲ್ಯಾಣಗಿರಿ, ಬನ್ನಿಮಂಟಪ. ಸರಸ್ವತಿಪುರಂ, ಗೋಕುಲಂ, ಬಂಬೂಬಜಾರ್ ನಲ್ಲಿ ಹೆಚ್ಚಿನ ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು ಮೈಸೂರಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ.
Key words: Corona -explosion –Mysore-More than- 140 positive cases