ಮೈಸೂರು, ಜೂನ್ 21, 2020 (www.justkannada.in): ಮೈಸೂರಿನಲ್ಲಿ ಕರೊನಾ ಮಹಾಮಾರಿ ಭೀತಿ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ದಿನೇ ದಿನೇ ಕರೊನಾ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿವಂತೆ ಸೂಚಿಸಿ ಆದೇಶ ಜಾರಿ ಮಾಡಲಾಗಿದೆ.
ಬೀದಿಬದಿ ಹಾಗೂ ಫಾಸ್ಟ್ ಫುಡ್ ನಂತಹ ಸ್ಥಳಗಳಲ್ಲಿ ಸಾರ್ವಜನಿಕ ಅಂತರ ಕಂಡುಬಾರದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ಸೂಚನೆನೀಡಿದ್ದಾರೆ.
ಶುಚಿತ್ವ ಸೇರಿದಂತೆ ಪಾಲಿಕೆ ನೀಡಿರುವ ಕಟ್ಟುನಿಟ್ಟಿನ ಆದೇಶಗಳು ಪಾಲನೆಯಾಗದ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪಾಲಿಕೆ.ಇದನ್ನು ಪಾಲಿಸದಿದ್ದರೆ ಅಂಗಡಿ ಮುಚ್ಚಿಸುವ ಎಚ್ಚರಿಕೆ ನೀಡಿದ್ದಾರೆ.