ಬೆಂಗಳೂರು,ಆ,4,2020(www.justkannada.in): ನಾಡಿನಲ್ಲಿ ಮಹಾಮಾರಿ ಕೊರೊನ ವೈರಸ್ ಭೀಕರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಜನತೆಯಲ್ಲಿ ನಾನು ಕಳಕಳಿಯಿಂದ ಮನವಿ ಮಾಡುತ್ತೀನಿ ದಯವಿಟ್ಟು ಎಲ್ಲರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮನೆಯಿಂದ ಹೊರಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮನವಿ ಮಾಡಿದ್ದಾರೆ.
ಈ ಕುರಿತು ರಾಜ್ಯದ ಜನತೆಗೆ ಕೆಲ ಸಲಹೆಗಳನ್ನ ನೀಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಆಗಾಗ ಕೈಯನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿ ಹೊರಗಡೆಯಿಂದ ಮನೆಗ ಬಂದ ತಕ್ಷಣ ಕೈ ಮತ್ತು ಕಾಲುಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿ ಕೆಲಸವಿಲ್ಲದ ಸಮಯದಲ್ಲಿ ಆದಷ್ಟು ಮನೆಯಲ್ಲೇ ಇರಲು ಆದ್ಯತೆ ಕೊಡಿ ಮಾರುಕಟ್ಟೆಗಳಲ್ಲಿ ಮತ್ತು ಬ್ಯಾಂಕ್ ಗಳಲ್ಲಿ ಹಾಗು ಇನ್ನಿತರ ಪ್ರದೇಶಗಳಲ್ಲಿ ಕೆಲವರು ಸಾಮಾಜಿಕ ಅಂತರವೇ ಪಾಲಿಸಸುತ್ತಿಲ್ಲ ಎಂಬುದನ್ನ ನಾನು ಮಾಧ್ಯಮಗಳ ಮುಖೇನ ಗಮನಿಸುತ್ತಿದ್ದೀನಿ ದಯವಿಟ್ಟು ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೀನಿ ಎಂದಿದ್ದಾರೆ.
ಇನ್ನು ಮಾಧ್ಯಮದವರಿಗೂ ಸಲಹೆ ನೀಡಿರುವ ಹೆಚ್.ಡಿಡಿ, ನಾನು ಮಾಧ್ಯಮ ಮಿತ್ರರಲ್ಲೂ ಮನವಿ ಮಾಡುತ್ತೀನಿ ತಾವುಗಳು ಸಹ ಹಗಲು ರಾತ್ರಿ ಎನ್ನದೇ ದಿನದ 24 ಗಂಟೆಗಳು ನಾಡಿನ ಸಮಸ್ತ ಜನತೆಗೆ ಮಾಹಿತಿಗಳನ್ನು ತಲುಪಿಸಲು ವಾರಿಯರ್ಸ್ ರಂತೆ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೀರ ದಯವಿಟ್ಟು ತಾವುಗಳು ಸಹ ತಮ್ಮ ಆರೋಗ್ಯದ ಕಡೇ ಹೆಚ್ಚಿನ ಗಮನ ಹರಿಸಿ ಎಂದು ಮನವಿ ಮಾಡಿದ್ದಾರೆ.
ಜೆಡಿಎಸ್ ಶಾಸಕರಾದ ಸುರೇಶ್ ಗೌಡ ನಾಗನಗೌಡ ಕಂದಕೂರ ಶೀಘ್ರ ಗುಣಮುಖರಾಗಲಿ…
ನಾಗಮಂಗಲ ಕ್ಷೇತ್ರದ ಶಾಸಕರಾದ ಸುರೇಶ್ ಗೌಡ ಅವರಿಗೆ ಮತ್ತು ಗುರುಮಿಠಕಲ್ ಕ್ಷೇತ್ರದ ಶಾಸಕರಾದ ನಾಗನಗೌಡ ಕಂದಕೂರ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ವಿಷಯ ತಿಳಿದು ಮನಸ್ಸಿಗೆ ಆಘಾತವಾಗಿದೆ. ನನ್ನ ಇಬ್ಬರು ಹಿತೈಷಿಗಳು ಶೀಘ್ರ ಗುಣಮುಖರಾಗಿ ಪುನಃ ಜನಸೇವೆಗೆ ಮರಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೆಚ್.ಡಿ ದೇವೇಗೌಡರು ಹಾರೈಸಿದ್ದಾರೆ.
Key words: Corona – Former Prime Minister -HD Deve Gowda -appealed – people – some advice