ಬೀದರ್,ನವೆಂಬರ್,23,2022(www.justkannada.in): ಕೊರೊನಾ ಮಹಾಮಾರಿ ದೇಶದಿಂದ ಹೋಗಲಾಡಿಸಿದರೆ ಉರುಳು ಸೇವೆ ನಡೆಸುವುದಾಗಿ ಹರಕೆ ಹೊತ್ತಿದ್ದ ಮಹಿಳೆಯೊಬ್ಬರು ಇದೀಗ ಆ ಹರಕೆಯನ್ನ ತೀರಿಸುತ್ತಿದ್ದು ಉರುಳು ಸೇವೆ ಆರಂಭಿಸಿದ್ದಾರೆ.
ಶಶಿಕಲಾ ಎಂಬುವವರು ದೇಶದಲ್ಲಿ ಕೋವಿಡ್ ಮುಕ್ತವಾದರೇ ಉರುಳುಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದರು. ನವೆಂಬರ್ 11 ರಿಂದಲೇ ರಾಷ್ಟೀಯ ಹೆದ್ದಾರಿ 50ರಿಂದ ಶಶಿಕಲಾ ಅವರು ಉರುಳು ಸೇವೆ ಮಾಡುತ್ತಿದ್ದಾರೆ.
ಕರ್ನಾಟಕ-ತೆಲಂಗಾಣ ಗಡಿಯಲ್ಲಿನ ಧನಶ್ರೀ ಗ್ರಾಮದ ಶಶಿಕಲಾ ಮಾತಾ ಅವರು ಧನಶ್ರೀ ಗ್ರಾಮದ ಭವಾನಿ ಮಂದಿರದಿಂದ ನವೆಂಬರ್.11 ರಂದು ಉರುಳು ಸೇವೆ ಆರಂಭಿಸಿದ್ದು, ಕಲಬುರಗಿ ಜಿಲ್ಲೆಯ ಘತರಗಾ ಭಾಗಮ್ಮ ದೇವಿ ದೇವಸ್ಥಾನದವರೆಗೆ ಸರಿ ಸುಮಾರು 200 ಕಿ.ಮೀ ದೂರದವರೆಗೆ ಈ ಸೇವೆ ಮಾಡುತ್ತಿದ್ದಾರೆ. ಸದ್ಯ ಹೈದ್ರಾಬಾದ್ ಮುಂಬೈ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಉರುಳುಸೇವೆ ಸಾಗುತ್ತಿದೆ.
ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆ ಹಾಗೂ ಸಂಜೆ 4 ಗಂಟೆಯಿಂದ 6 ಗಂಟೆಯ ವರೆಗೆ ಉರುಳು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿನಿತ್ಯ ಸರಾಸರಿ 5 ರಿಂದ 7 ಕಿ.ಮೀ ದೂರದ ವರೆಗೆ ಉರುಳು ಸೇವೆ ನಡೆಯುತ್ತಿದೆ. 30 ದಿನಗಳಲ್ಲಿ ಘತರಗಾ ದೇವಸ್ಥಾನಕ್ಕೆ ತಲುಪಲಿದ್ದಾರೆ. ಶಶಿಕಲಾ ಮಾತಾ. ಅವರ ಜೊತೆಯಲ್ಲಿ ಸುಮಾರು 15 ಜನರಿದ್ದು, ಊರುಳು ಸೇವೆ ಸಂದರ್ಭದಲ್ಲಿ ಭಜನೆ, ಕೀರ್ತನೆಗಳು ನಡೆಸುತ್ತಾ ಅವರ ಜೊತೆ ಸಾಗುತ್ತಿದ್ದಾರೆ. ಇವರು ಸಾಗುವ ರಸ್ತೆಗಳಲ್ಲಿ ಆಯಾ ಭಾಗದ ಜನರು, ರಾಜಕೀಯ ಮುಖಂಡರು ಭೇಟಿ ನೀಡಿ ಉರುಳು ಸೇವೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ವಸತಿ, ಪ್ರಸಾದ ವ್ಯವಸ್ಥೆಗಳು ಕೂಡ ಕಲ್ಪಿಸುತ್ತಿದ್ದಾರೆ ಅಂತಾರೆ ಅವರ ಜೊತೆ ಇರುವ ವಿಶ್ವಾನಾಥ.
ಕೊರೊನಾ ಸಂದರ್ಭದಲ್ಲಿ ದೇಶದ ಜನರು ಅನೇಕ ರೀತಿಯ ಸಂಕಷ್ಟಗಳು ಸಂಕಷ್ಟಕ್ಕೀಡಾಗಿದ್ದರು. ಅದ್ದರಿಂದ ದೇಶದಲ್ಲಿ ಕೊರೊನಾ ಮುಕ್ತಮಾಡುವಂತೆ ಘತರಗಾ ಭಾಗಮ್ಮಾ ದೇವಿಯಲ್ಲಿ ಭೇಡಿ ಶಶಿಕಲಾ ಹರಕೆ ಹೊತ್ತಿದ್ದರು.
ಒಟ್ಟಾರೆ ಈಗ ಕರ್ನಾಟಕ ರಾಜ್ಯದ ಹುಮನಾಬಾದ್ ತಾಲೂಕಿನ ರಸ್ರೆಯ ಮೇಲೆ ಅವರು ಊರುಳು ಸೇವೆ ಮುಂದುವರೆಸಿದ್ದಾರೆ. ದೇಶದ ಜನರಿಗೆ ಕರೋನಾದಿಂದ ಮುಕ್ತಿ ಸಿಗಲಿ ಅನ್ನೋ ಉದ್ದೇಶಕ್ಕೆ ಅವರು ನಡೆಸುತ್ತಿರುವ ನಿಸ್ವಾರ್ಥ ಊರುಳು ಸೇವೆ ಎಲ್ಲರ ಮನಗೆದ್ದಿದೆ.
Key words: Corona free-200 km -woman – urulu seve-bidar