ಮೈಸೂರು,ಮಾ,21,2020(www.justkannada.in): ಮಹಾಮಾರಿ ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ, ನಾಳೆ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದು ಹಲವು ಸಂಘಟನೆಗಳು ಇದಕ್ಕೆ ಬೆಂಬಲ ನೀಡಿವೆ. ಈ ನಡುವೆ , ಸಂಘದ ನಿರ್ದೇಶನ ಹಾಗೂ ಜಿಲ್ಲಾಡಳಿತ ಸೂಚನೆ ಪಾಲಿಸದ ಹೋಟೆಲ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ, ಸಂಘದ ನಿರ್ದೇಶನ ಹಾಗೂ ಜಿಲ್ಲಾಡಳಿತ ಸೂಚನೆ ಪಾಲಿಸದ ಹೋಟೆಲ್ ಗಳ ಲೈಸನ್ಸ್ ನವೀಕರಣ ಮಾಡದಂತೆ ಅಧಿಕಾರಿಗಳಿಗೆ ಸಂಘದಿಂದಲೇ ಮನವಿ ಮಾಡ್ತೇವೆ. ಕೊರೊನೊ ತಡೆಗಟ್ಟಲು ಈಗಾಗಲೆ ಸಂಘದಿಂದ ಸ್ಪಷ್ಟ ಸೂಚನೆ ನೀಡಿದ್ದೇವೆ. ಕೆಲವರು ಪಾಲಿಸುತ್ತಿಲ್ಲ ಎಂಬುದು ತಿಳಿದುಬಂದಿದೆ. ಅಂತಹವರ ವಿರುದ್ಧ ಸಂಘ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಎಷ್ಟೆ ದೊಡ್ಡವರಾಗಿದ್ದರೂ ನಿಯಮ ಪಾಲಿಸ ಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಲ್ಲಿ ಚೆಲ್ಲಾಟ ಆಡಬಾರದು. ಮುಖ್ಯಮಂತ್ರಿಗಳು ಸರ್ಕಾರದ ಆದೇಶವನ್ನೇ ಹೊರಡಿಸಿದ್ದಾರೆ. ಅದನ್ನ ಪಾಲಿಸದಿದ್ದರೆ ಟ್ರೇಡ್ ಲೈಸನ್ಸ್, ಪುಡ್ ಲೈಸನ್ಸ್, ಲೇಬಲ್ ಲೈಸನ್ಸ್ ನವೀಕರಣ ಮಾಡದಂತೆ ಅಧಿಕಾರಿಗಳಿಗೆ ಸಂಘದಿಂದಲೇ ಸೂಚನೆ ನೀಡ್ತೇವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಎಂದು ತಿಳಿಸಿದರು.
ನಾಳೆಯಿಂದ ನಮ್ಮಲ್ಲ ವರ್ಕ್ ಪ್ರಮ್ ಹೋಮ್, ವರ್ಕ್ ಫ್ರಮ್ ಹೋಟೆಲ್, ಬೇಕರಿ ಲಾಡ್ಜ್ ಅಲ್ಲಿಂದಲೇ ಸೇವೆ ಕೊಡುವ ವ್ಯವಸ್ಥೆ ಮಾಡಲಾಗುತ್ತೆ. ಬೀದಿ ಬದಿ ವ್ಯಾಪಾರದ ಸ್ವಚ್ಚತೆ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಆದೇಶಗಳನ್ನ ಕಾರ್ಯರೂಪಕ್ಕೆ ತರುತ್ತಿಲ್ಲ. ಪೋಲೀಸ್ ಇಲಾಖೆ ಕೂಡ ಎಚ್ಚರಿಸಿದ್ರೆ ಮೈಸೂರು ಜನತೆ ಆರೋಗ್ಯ ಕಾಪಾಡಬಹುದು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳಿದರು.
Key words: corona-Hotels- District -Notice -Warning – Action