ಚಾಮರಾಜನಗರ,ಮೇ,1,2021(www.justkannada.in): ಕೊರೊನಾ 2ನೇ ಅಲೆ ವೇಳೆ ಚುನಾವಣೆಯನ್ನ ಮುಂದೂಡಬಹುದಿತ್ತು. ಆದರೆ ಮೋದಿ ಅಧಿಕಾರ ದಾಹಕ್ಕಾಗಿ ಜನರ ಜೀವ ಬಲಿ ಪಡೆಯುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆಕ್ರೋಶ ಹೊರಹಾಕಿದರು.
ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಆರ್.ಧೃವನಾರಾಯಣ್, ಸಿಲಿಕಾನ್ ವ್ಯಾಲಿ ಬೆಂಗಳೂರು ಕೊರೋನಾ ವ್ಯಾಲಿಯಾಗಿದೆ. ಕೊರೋನಾ ಎದುರಿಸುವಲ್ಲಿ ಕೇಂಧ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಸೆಪ್ಟಂಬರ್ ನಲ್ಲಿ ರಾಜ್ಯ ಸರ್ಕಾರಕ್ಕೆ ತಜ್ಞರ ಸಮಿತಿ ವರದಿ ನೀಡಿತ್ತು. ಆದರೆ ತಜ್ಞರ ಸಮಿತಿ ವರದಿಯನ್ನ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿ ಮಾಡಿಲ್ಲ. ಸಕಾಲದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಕೊರೋನಾ 2ನೇ ಅಲೆ ವೇಳೆ ಚುನಾವಣೆ ನಡೆಸಬಾರದಿತ್ತು. ಚುನಾವಣೆ ಮುಂದೂಡಬಹುದಿತ್ತು. ಆದರೆ ಮೋದಿ ಅಧಿಕಾರದ ದಾಹಕ್ಕೆ ಜನರು ಬಲಿಯಾಗುತ್ತಿದ್ದಾರೆ. ಕುಂಭಮೇಳದಲ್ಲೂ ವ್ಯಾಪಕ ಕೊರೋನಾ ಹರಡಿತ್ತು ಎಂದು ಆರ್.ಧೃವನಾರಾಯಣ್ ಕಿಡಿಕಾರಿದರು. ಹಾಗೆಯೇ 10 ಸಾವಿರ ಬೆಡ್ ಇದೆ ಎಂಧು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಆದರೆ ಅದು ನೂರುಕ್ಕೆ ಸೂರು ಕಪೋಕಲ್ಪತ ಹೇಳಿಕೆ ಎಂದು ಟೀಕಿಸಿದರು.
Key words: corona-increase-KPCC-work- President -R. Dhruvanarayan- outrage.