ಬೆಂಗಳೂರು, ಆಗಸ್ಟ್ 02, 2020 (www.justkannada.in): ದೇಶದಲ್ಲಿ 24 ತಾಸುಗಳಲ್ಲಿ 54,700ಕ್ಕೂ ಹೆಚ್ಚು ಹೊಸ ಸೋಂಕು ಮತ್ತು 850ಕ್ಕೂ ಅಧಿಕ ಸಾವಿನ ಪ್ರಕರಣಗಳು ವರದಿಯಾಗಿದೆ.
ಈ ಆತಂಕದ ನಡುವೆಯೇ 11.45 ಲಕ್ಷ ಮಂದಿ ಹೆಮ್ಮಾರಿಯ ಮೃತ್ಯು ಪಂಜರದಿಂದ ಪಾರಾಗಿದ್ದು, ಚೇತರಿಕೆ ಪ್ರಮಾಣದಲ್ಲಿ ಶೇ.65.44ರಷ್ಟು ಏರಿಕೆ ಕಂಡುಬಂದಿದೆ.
ನಿನ್ನೆಯಿಂದ ಇಂದು ಬೆಳಗ್ಗೆವರೆಗೆ 54,736 ಜನರಿಗೆ ಸಾಂಕ್ರಾಮಿಕ ರೋಗ ತಗುಲಿದೆ. ಭಾರತದಲ್ಲಿ ಸೋಂಕು ಪೀಡಿತರ ಪ್ರಮಾಣ 18 ಲಕ್ಷ ಮತ್ತು ಮೃತರ ಸಂಖ್ಯೆ 38,000 ಸನಿಹದಲ್ಲಿರುವುದು ಆಘಾತಕಾರಿಯಾಗಿದೆ.
ಸದ್ಯದಲ್ಲೇ ಸ್ಯಾಂಪಲ್ ಪರೀಕ್ಷಾ ಸಾಮಥ್ರ್ಯವನ್ನು ಪ್ರತಿದಿನ 10 ಲಕ್ಷಕ್ಕೇರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ತಿಳಿಸಿದ್ದಾರೆ.