ಕೊರೋನಾ ಹೆಚ್ಚಾದ್ರೆ ಕಠಿಣ ನಿಯಮ ಜಾರಿ-ಎಚ್ಚರಿಕೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

 

ಬೆಂಗಳೂರು,ಮಾರ್ಚ್,19,2021(www.justkannada.in): ಕೋವಿಡ್ 2ನೇ ಅಲೆ ಆರಂಭವಾಗಿದ್ದು ಕೊರೋನಾ  ಹೆಚ್ಚಾದರೇ ಕಠಿಣ ನಿಯಮ ಜಾರಿ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ಜನರು ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಬೇಕು. ಜನರೇ ಹೆಚ್ಚಾಗಿ ಬಂದು ಕೊರೋನಾ ಲಸಿಕೆ ಹಾಕಿಸಿಕೊಳ್ಳಬೇಕು. ಗಡಿ ಭಾಗದ ರಾಜ್ಯಗಳಲ್ಲಿ ಕೊರೋನಾ ಹೆಚ್ಚಾಗಿದೆ. ಇದನ್ನ ನಾವು ನಿರೀಕ್ಷೆ ಮಾಡಿದ್ದವು ಎಂದರು.Corona - increasingly - strict rule -Health Minister- Dr K Sudhakar

ಕೊರೋನಾ ಬಗ್ಗೆ ಇಂದು ಸಿಎಂ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಚಿತ್ರಮಂದಿರಗಳ ವಿಚಾರವನ್ನೂ ಚರ್ಚೆ ಮಾಡುತ್ತೇನೆ. ಕೊರೋನಾ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ENGLISH SUMMARY….

Health Minister K. Sudhakar warns tough rules if Corona cases increases
Bengaluru, Mar. 19, 2021 (www.justkannada.in): Health and Medical Education Minister Dr. K. Sudhakar today informed that tough rules might have to be implemented if the number of Corona cases increases for a few more days.
Speaking to the press persons today he requested the citizens of the state to compulsorily follow Corona guidelines like wearing a mask. He also called upon the people to voluntarily get vaccinated. “The number of Corona cases has increased in the border areas and we had expected this,” he added.
He also said that further decisions will be taken after discussing with the Chief Minister, including Cinema halls.
Keywords: Health Minister Dr. K. Sudhakar/ Corona/ tough rules/ guidelines

Key words: Corona – increasingly – strict rule -Health Minister- Dr K Sudhakar