ಧಾರವಾಡ,ನವೆಂಬರ್,25,2021(www.justkannada.in): ಕೊರೊನಾ ಆರ್ಭಟ ತಗ್ಗಿದೆ ಎಂದು ನಿಟ್ಟುಸಿರು ಬಿಡುವ ಬೆನ್ನಲ್ಲೆ ಇದೀಗ ಮತ್ತೆ ತನ್ನ ಆಟ ಶುರು ಮಾಡಿದಂತಿದೆ. ಧಾರವಾಡದ ಎಸ್ ಡಿಎಂ ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಧಾರವಾಡದ ಸತ್ತೂರು ಬಡಾಣೆಯಲ್ಲಿರೋ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಆರಂಭದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆ 300 ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ತಪಾಸಣೆ ವೇಳೆ 66 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ.
ಇನ್ನೂ 200 ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಲು ನಿರ್ಧರಿಸಿದ್ದು, ಹಾಸ್ಟೆಲ್‌ನಲ್ಲಿ ಸೋಂಕಿತರಿಗೆ ಕ್ವಾರಂಟೈನ್ ಮಾಡಲಾಗಿದೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಕಾಲೇಜಿಗೆ ಭೇಟಿ ನೀಡಿದ್ದು ಕಾಲೇಜು ಪ್ರಾಂಶುಪಾಲರ ಜತೆ ಚರ್ಚೆ ನಡೆಸಿದ್ದಾರೆ.
SDM ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ಹಿನ್ನೆಲೆ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೂ ಕೊವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ.
Key words: Corona-infection-detection – 66 students- medical college.
ENGLISH SUMMARY…
66 Medical College students test Corona Positive in Dharwad
Dharwad, November 25, 2021 (www.justkannada.in): The COVID-19 Pandemic appears to be playing hide and seek. About 66 students of the SDM Medical College in Dharwad have tested COVID positive.
Sixty-six students of the SDM Medical College located in the Suttur Layout in Dhaward have tested positive. Four students had tested positive at the beginning following which COVID tests were conducted for 300 students, out of which 66 have tested positive.
Tests will be conducted on the remaining 200 students. All the COVID positive students have been quarantined. Deputy Commissioner Nitesh Patel visited the college and discussed with the Principal.
Keywords: Dharwad/ SDM Medical College/ 66 students/ COVID positive