ಮೈಸೂರು,ಜೂ,27,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ಸಹ 11 ಪಾಸಿಟಿವ್ ಪ್ರಕರಣಗಳು ಬರುವ ಸಾಧ್ಯತೆ ಇದೆ.
ಈ ನಡುವೆ ಚೆನೈನಿಂದ ಮೈಸೂರಿಗೆ ಬಂದಿದ್ದ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ ಎನ್ನಲಾಗಿದೆ. ಕೆ. ಆರ್ ಮೊಹಲ್ಲಾದ ವಿಣೇಶೇಷಣಾ ರಸ್ತೆಯ ಸಂಬಂಧಿಕರ ಮನೆಗೆ ಮಹಿಳೆ ಬಂದಿದ್ದರು. ಮಹಿಳೆಗೆ ಕೊರೋನಾ ದೃಢಪಟ್ಟ ಹಿನ್ನಲೆ ವೀಣೆ ಶೇಷಣಾ ರಸ್ತೆಯ ಸೀಲ್ ಡೌನ್ ಮಾಡಲಾಗಿದೆ. ರಸ್ತೆ ಎರಡು ಕಡೆ ಬ್ಯಾರಿ ಗೇಟ್ ಅಳವಡಿಕೆ ಮಾಡಲಾಗಿದೆ.
ಚೆನೈನಿಂದ ಬಂದಿದ್ದ ವ್ಯಕ್ತಿಯನ್ನ ಕೊರಂಟೈನ್ ಮಾಡಿದ್ರು. ಕ್ವಾರಂಟೈನ್ ಮಾಡಿದ್ದ ವ್ಯಕ್ತಿ ಮಾಹಿತಿ ನೀಡಲಿಲ್ಲವೆಂದು ಸ್ಥಳಯರು ಬೇಸರ ವ್ಯಕ್ತಪಡಿಸಿದ್ದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರಿನಲ್ಲಿ 11 ಕೊರೋನಾ ಪಾಸಿಟಿವ್ ಪ್ರಕರಣಗಳು ಬರುವ ಸಾಧ್ಯತೆ ಇದ್ದು ಸಕ್ರಿಯ ಪ್ರಕರಣಗಳು ನೂರರ ಗಡಿ ದಾಟಲಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಮೈಸೂರಿನಲ್ಲಿ ಆತಂಕ ಹೆಚ್ಚಾಗಿದ್ದು ಹೆಚ್ಚದ ಆತಂಕ. ಸಮುದಾಯಕ್ಕೆ ಸೋಂಕು ಹರಡುವ ಭೀತಿಯಲ್ಲಿದ್ದಾರೆ ಮೈಸೂರಿಗರು. ಟ್ರಾವಲ್ ಹಿಸ್ಟರಿ ಇಲ್ಲದವರಿಗೂ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದು ಹೀಗಾಗಿ ಇದು ಜಿಲ್ಲಾಡಳಿತಕ್ಕೆ ತಲೆನೋವಾಗುತ್ತಿವೆ.
Key words: Corona- infection – woman-11 positive -cases – Mysore -today