ಮೈಸೂರು,ಮಾ,17,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿಗೆ ಈಗಾಗಲೇ ಮೂರು ಬಲಿಯಾಗಿದ್ದು, ಈ ಹಿನ್ನೆಲೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕೋರಾನಾ ಭೀತಿ ಆತಂಕ ಹೆಚ್ಚಾಗಿದೆ. ಇದರಿಂದಾಗಿ ಜನಬೀಡ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ಕೊರೋನಾ ಹರಡುವ ಭೀತಿ ಹಿನ್ನೆಲೆ ಮೈಸೂರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕೋರ್ಟ್ ಗೆ ಬರುವ ಕಕ್ಷಿದಾರರು ಮತ್ತು ಸಿಬ್ಬಂದಿಗಳನ್ನ ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಜಿಲ್ಲಾ ಅರೋಗ್ಯ ಅಧಿಕಾರಿಗಳು ಪ್ರತಿಯೊಬ್ಬ ಸಿಬ್ಬಂದಿ ಮತ್ತು ಕಕ್ಷಿದಾರರರನ್ನ ಥರ್ಮಲ್ ಇಂಡೇಕ್ಟೇಟರ್ ಮೂಲಕ ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರ ದೇಹ ತಾಪಮಾನ ಹಾಗೂ ಹೆಸರನ್ನ ನೊಂದಯಿಸಿಕೊಳ್ಳುತ್ತಿದ್ದಾರೆ.
ಈ ಕುರಿತು ಮಾತನಾಡಿದ ಅರೋಗ್ಯ ಅಧಿಕಾರಿ ಬಸವರಾಜ್, ಜಿಲ್ಲಾಡಳಿತದ ಆದೇಶದ ಮೇರೆಗೆ ಈ ಕಾರ್ಯ ಮಾಡುತ್ತಿದ್ದೇವೆ. ಯಾವುದೇ ರೀತಿ ರೋಗದ ಲಕ್ಷಣ ಕಂಡು ಬಂದ್ರೆ ಜಿಲ್ಲಾ ಅರೋಗ್ಯ ಅಧಿಕಾರಿಗಳಿಗೆ ಗಮನಕ್ಕೆ ತರಲಾಗುವುದು. ನ್ಯಾಯಾಲಯದಲ್ಲಿ ನಿಮ್ಮ ಕೇಸ್ ಗಳಿಗೆ ಹಾಜರಾಗುವ ಅವಶ್ಯಕತೆ ಇಲ್ಲ. ಈಗಾಗಲೇ ನ್ಯಾಯಾಲಯ ಇದಕ್ಕೆ ವಿನಾಯಿತಿ ನೀಡಿದೆ ಎಂದು ತಿಳಿಸಿದರು.
Key words: Corona- Inspection -staff – clients – Mysore court