ನವದೆಹಲಿ,ಜುಲೈ,30,2021(www.justkannada.in): ಕೇರಳ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಗಡಿಭಾಗಗಳಲ್ಲಿ ಬಿಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಆದ ಬಳಿಕ ಮೊದಲ ಬಾರಿಗೆ ದೆಹಲಿಗೆ ಬಸವರಾಜ ಬೊಮ್ಮಾಯಿ ತೆರಳಿದ್ದು ಬಿಜೆಪಿ ಹಿರಿಯ ನಾಯಕರನ್ನ ಭೇಟಿಯಾಗಲಿದ್ದಾರೆ. ಈ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೇರಳ ರಾಜ್ಯದ ಗಡಿಭಾಗದಲ್ಲಿ ಎಚ್ಚರಿಕೆ ಅಗತ್ಯ. ರಾಜ್ಯದ ಗಡಿಭಾಗದಲ್ಲಿ ಬಿಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ರಾಜ್ಯಕ್ಕೆ ವಾಪಸ್ ಆದ ಬಳಿಕ ಈ ಬಗ್ಗೆ ಸಭೆ ಮಾಡುತ್ತೇನೆ. ಕೊರೋನಾ ನಿಯಂತ್ರಣ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ENGLISH SUMMARY…
Increasing corona cases in Kerala causes concern to Karnataka: CM Bommai instructs strict vigil at border
New Delhi, July 30, 2021 (www.justkannada.in): Following an increase in COVID cases in Kerala State, Chief Minister Basavaraj Bommai has instructed the officials concerned to increase the vigil at the borders.
Basavaraj Bommai is in Delhi for the first time after taking charge as the Chief Minister of Karnataka, to visit the party national leaders. Speaking to the media persons, he observed that as it is necessary to keep a vigil at the border of Kerala State, I have given instructions to the officials concerned to take necessary steps. “I will discuss this with the officials concerned, after returning to the State,” he said.
Keywords: CM Basavaraj Bommai/ increase/ corona cases/ Kerala/ border/ vigil
Key words: Corona – Kerala-border – New Delhi -CM -Basavaraja Bommai.