ಬೆಂಗಳೂರು,ಜೂ,9,2020(www.justkannada.in): ರಾಜ್ಯದ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಇಂದಿನಿಂದ ಬಸ್ ಸಂಚಾರ ಶುರುವಾಗಿದೆ.
ಕೊರೋನಾ ಹರಡುವ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ಲಾಕ್ ಡೌನ್ ಸಡಿಲಿಕೆ ಬಳಿಕ ಕೇವಲ ನಗರ ಪ್ರದೇಶಗಳಿಗಷ್ಟೆ ಬಸ್ ಸಂಚಾರ ಸೀಮಿತವಾಗಿತ್ತು. ನಂತರ ಇದೀಗ ಹಳ್ಳಿ ಹಳ್ಳಿಗಳಿಗೂ ಬಸ್ ಸಂಚಾರ ಶುರುವಾಗಿದೆ. ಹೀಗೆ ಹಂತ ಹಂತವಾಗಿ ಕೆಎಸ್ ಆರ್ ಟಿಸಿ ಬಸ್ ಗಳ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಿಸುತ್ತಿದೆ.
ಗ್ರಾಮೀಣ ಭಾಗದಲ್ಲಿ ಬಸ್ ಗಳಲ್ಲಿ ಸಾರ್ವಜನಿಕ ಅಂತರ ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದ್ದು, ಈ ಸವಾಲುಗಳ ನಡುವೆ ಬಸ್ ಸಂಚಾರ ಆರಂಭವಾಗಲಿದೆ. ಬಸ್ ಸಂಚಾರದ ವೇಳೆ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಿದೆ.
Key words: corona- lockdown-KSRTC-bus- service – village