ಮೈಸೂರು,ಜು,31,2020(www.justkannada.in): ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಪಿ.ಮಂಜುನಾಥ್ ವಾಗ್ದಾಳಿ ನಡೆಸಿದರು.
ಕೊರೊನಾ ನಿರ್ವಹಣೆ ವಿಫಲ ಕುರಿತು ಮೈಸೂರಿನ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕರಾದ ಹೆಚ್.ಪಿ.ಮಂಜುನಾಥ್, ಯತೀಂದ್ರ ಸಿದ್ದರಾಮಯ್ಯ ಹಾಗೂ ಎಂಎಲ್ಸಿ ಧರ್ಮಸೇನಾರಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹೆಚ್.ಪಿ ಮಂಜುನಾಥ್, ಮೈಸೂರು ಜಿಲ್ಲೆಯಲ್ಲಿ ಕೋರೋನ ಹಾವಳಿ ಎಲ್ಲೆ ಮೀರಿ ಹೋಗಿದೆ. ಜಿಲ್ಲಾಡಳಿತ ಪ್ರತಿ ದಿನ ಬುಲೇಟಿನ್ ಬಿಡುಗಡೆ ಮಾಡಿ ಸೋಂಕಿತರು, ಸತ್ತವರ ಲೆಕ್ಕ ಕೊಡುವುದರಲ್ಲೆ ಕಾಲ ಕಳೆಯುತ್ತಿದೆ. ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ರೆ ಹೆಲ್ಪ್ ಲೆಸ್ ಅಂತಾರೆ. ಮೈಸೂರಿನಲ್ಲಿ ವೆಂಟಿಲೇಟೆರ್ ಕೊರತೆ ಇದೆ. ಕೋವಿಡ್ ಆಸ್ಪತ್ರೆಗೆ ಹೋದ್ರೆ ಸಾಕಷ್ಟು ಅವ್ಯವಸ್ಥೆ ಇದೆ. ರಾಜ್ಯ ಸರ್ಕಾರ ಪ್ರಚಾರಕ್ಕೆ ಬಳಸಿದ ಹಣದಲ್ಲಿ ಆಸ್ಪತ್ರೆ ಕಟ್ಟಿಸಿದ್ರೆ ನೂರು ಜನ ಬದುಕುತಿದ್ರು ಎಂದು ಕಿಡಿಕಾರಿದರು. ಹುಣಸೂರಿನ, ರೈತರು, ಡ್ರೈವರ್, ಯಾರಿಗೆ ಸರ್ಕಾರದ ಹಣ ತಲುಪಿಲ್ಲ. ಹುಣಸೂರು ಕರ್ನಾಟ ರಾಜ್ಯದಿಂದ ಹೊರಗಿದೆಯೇ.? ಎಂದು ಹೆಚ್.ಪಿ ಮಂಜುನಾಥ್ ಪ್ರಶ್ನಿಸಿದರು.
ಪ್ರತಿ ಜಿಲ್ಲೆಯಲ್ಲಿ ಆರ್.ಎಸ್.ಎಸ್ ಬೊಟ್ಟು, ಚಡ್ಡಿಗಳು ಹಿಂಬಾಗಿಲಿನಿಂದ ಆಡಳಿತ ನಡೆಸುತ್ತಿದ್ದಾರೆ….
ಪ್ರತಿ ಜಿಲ್ಲೆಯಲ್ಲಿ ಆರ್.ಎಸ್.ಎಸ್ ಬೊಟ್ಟು, ಚಡ್ಡಿಗಳು ಹಿಂಬಾಗಿಲಿನಿಂದ ಆಡಳಿತ ನಡೆಸುತ್ತಿದ್ದಾರೆ. ಕೊರೊನಾಗೆ ಮೊದಲು ಅವರು ಚಪ್ಪಾಳೆ ಹೊಡೆದು ಸ್ವಾಗತ ಮಾಡಿದ್ರು. ನಂತರ ದೀಪ ಹಚ್ಚಿ ಆರತಿಮಾಡಿ ಕರೆದುಕೊಂಡ್ರು. ಈಗ ಹೆಬ್ಬಾಗಿಲು ತೆರೆದು ಬರಮಾಡಿಕೊಳ್ಳುತ್ತಿದ್ದಾರೆ. ಇವರು ಹೇಳಿರುವ ಕೋವಿಡ್ ಲೆಕ್ಕದಲ್ಲಿ ಬಹಳ ಸುಳ್ಳಿದೆ. ಪ್ರತಿ ಇಲಾಖೆಗೆ 30 ರಿಂದ 40 ರಷ್ಟು ಮಾತ್ರ ಹಣ ಬಂದಿದೆ. ಆದರೆ ಇವರು ಹೇಳುವ ಲೆಕ್ಕವೇ ಬೇರೆ ಎಂಧು ಹೆಚ್.ಪಿ ಮಂಜುನಾಥ್ ಆರೋಪಿಸಿದರು.
ಕೋವಿಡ್ ಸಮಯದಲ್ಲಿ ಸಿದ್ದರಾಮಯ್ಯ ತಂದಿದ್ದ ಅನ್ನಭಾಗ್ಯ ನೆರವಾಗಿದ್ದು, ಜನರ ಹಸಿವನ್ನ ಆ ಅನ್ನಭಾಗ್ಯ ನಿಗಿಸಿದೆ. ಬಿಜೆಪಿಯವರು ಫಲಾಯನವಾದಿಗಳು. ಆಡಳಿತ ನಡೆಸುವಲ್ಲಿ ಒಂದು ವರ್ಷ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೊರೋನಾ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯ್ದರು.
ಕೋರೋನಾ ತುರ್ತು ಪರಿಸ್ಥಿತಿ ನೆಪದಲ್ಲಿ ರಾಜ್ಯ ಸರ್ಕಾರದಿಂದ ಮರಣ ಶಾಸನ – ಶಾಸಕ ಯತೀಂದ್ರ ಸಿದ್ಧರಾಮಯ್ಯ…
ಇದೇ ವೇಳೆ ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಕೋರೋನಾ ತುರ್ತು ಪರಿಸ್ಥಿತಿ ನೆಪದಲ್ಲಿ ರಾಜ್ಯ ಸರ್ಕಾರ ಮರಣ ಶಾಸನ ಬರೆಯುತ್ತಿದೆ. ಸದನದಲ್ಲಿ ವಿಷಯ ಮಂಡನೆ ಮಾಡದೇ ಕಾಯ್ದೆ ಜಾರಿಗೆ ತರೋದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಎಪಿಎಂಸಿ, ಭೂ ಸುಧಾರಣೆ ಸೇರಿ ಹಲವು ಕಾಯ್ದೆಗಳನ್ನ ತರಾತುರಿಯಲ್ಲಿ ಜಾರಿಗೆ ತರುತ್ತಿದೆ. ಪರಿಸ್ಥಿತಿ ಹೀಗೆ ಆದ್ರೆ ರಾಜ್ಯದ ಅನ್ನದಾತ ಕೂಲಿ ಕಾರ್ಮಿಕನಾಗ್ತಾನೆ ಎಂದು ರಾಜ್ಯ ಸರ್ಕಾರದ ನಡೆ ಬಗ್ಗೆ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಲಾಕ್ ಡೌನ್ ಮಾಡಿ ಕೋರೋನ ಸಂಪರ್ಕಿತರನ್ನ ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕು. ಆದ್ರೆ ಹೋಂ ಕ್ವಾರಂಟೈನ್ ಮಾಡ್ತಿದ್ದಾರೆ. ಹೀಗೆ ಆದ್ರೆ ಕೋರೋನ ಕೈ ಮೀರಿ ಹರಡಲಿದೆ. ಕೋರೋನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಜನ ಪ್ರತಿ ದಿನ ಭಯದಲ್ಲೇ ಕಾಲ ಕಳೆಯುತ್ತಿದ್ದು, ರಾಜ್ಯದಲ್ಲಿ ಸರ್ವಾಧಿಕಾರಿ ಆಡಳಿತ ಇದೆ ಎಂದು ಯತೀಂದ್ರ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
Key words: corona- mysore- Congress-MLA- HP Manjunath- yathindra siddaramaiah