ಮೈಸೂರು,ಮಾ,21,2020(www.justkannada.in): ಪ್ರಪಂಚದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದ್ದು ದೇಶದಲ್ಲೂ ತೀವ್ರ ಆತಂಕ ಸೃಷ್ಠಿಸಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಮೈಸೂರಿನ ರೈಲ್ವೆ ಕಚೇರಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಪ್ರಯಾಣಿಕರು ಇದನ್ನ ಪಾಲಿಸಬೇಕಿದೆ.
ಕೊರೋನಾ ಹರಡುವ ಆತಂಕ ಹಿನ್ನೆಲೆ, ಮೈಸೂರು ರೈಲ್ವೆ ಕಚೇರಿಯು ರೈಲು ನಿಲ್ದಾಣದ ಟಿಕೆಟ್ ಕೌಂಟರ್ ನಲ್ಲಿ ಪ್ರಯಾಣಿಕರ ಮಧ್ಯೆ ಅಂತರ ಕಾಯ್ದುಕೊಳ್ಳಲು ಪ್ರತಿ 1 ಮೀ. ಅಂತರದಲ್ಲಿ ಕೆಂಪು ಪಟ್ಟಿ ರಚಿಸಿದೆ. ಈ ಕೆಂಪು ಪಟ್ಟಿಯಲ್ಲಿ ನಿಂತು ಪ್ರಯಾಣಿಕರು ಟಿಕೆಟ್ ಪಡೆಯಬೇಕಿದೆ.
ಇನ್ನು ರೈಲ್ವೆ ನಿಲ್ದಾಣದ 1ನೇ ಪ್ಲಾಟ್ಫಾರ್ಮ್ ನಲ್ಲಿ ‘ಕೋವಿಡ್-19 ಸಹಾಯ ವಾಣಿ ಆರಂಭಿಸಿದ್ದು, ರೈಲ್ವೆ ಸಿಬ್ಬಂದಿಗಳು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ.
Key words: corona- mysore- railway station- Precautionary -action